ಮಹಿಳೆಗೆ ಬ್ಲಾಕ್ ಮೇಲ್: ಪ್ರಕರಣ ದಾಖಲು

ಹೊಸದಿಗಂತ ವರದಿ, ಮೈಸೂರು:

ನಿನ್ನ ವಾಯ್ಸ್ ರೆಕಾರ್ಡ್ ಹಾಗೂ ನಡುವಳಿಕೆಯ ಫೋಟೋಗಳನ್ನು ನಿಮ್ಮ ಫ್ಯಾಮಿಲಿಗೆ ಕಳುಹಿಸಿ ಗೌರವಕ್ಕೆ ಧಕ್ಕೆ ತರುವುದಾಗಿ ದೂರದ ಸಂಬoಧಿಯೊಬ್ಬ ಮಹಿಳೆಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನ ಉಮಾಪತಿ ಹಾಗೂ ಶೀಲಾ ಗೋಪಾಲ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮಕೃಷ್ಣನಗರದಲ್ಲಿ ಬಾಟಿಕ್ ನಡೆಸುತ್ತಿರುವ ಮಹಿಳೆಗೆ ದೂರದ ಸಂಬoಧಿಯಾದ ತಮಿಳುನಾಡಿನ ಕೊಯಮತ್ತೂರಿನ ನಿವಾಸಿಯಾದ ಉಮಾಪತಿ ಪರಿಚಯವಾಗಿ ಹತ್ತಿರವಾಗಿದ್ದಾನೆ. ಕೊಯಮತ್ತೂರಿನಲ್ಲಿ ಬುಸಿನೆಸ್ ಮನ್ ಆಗಿರುವ ಉಮಾಪತಿ ಮಹಿಳೆಗೆ ಸಾಕಷ್ಟು ಬಾರಿ ಆರ್ಥಿಕ ನೆರವು ನೀಡಿದ್ದಾರೆ.ಈ ಮಧ್ಯೆ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಶೀಲಾಗೋಪಾಲ್ ಎಂಬುವರನ್ನ ದೂರುದಾರ ಮಹಿಳೆ ಉಮಾಪತಿಗೆ ಪರಿಚಯಿಸಿದ್ದಾರೆ. ಶೀಲಾಗೋಪಾಲ್ ಹಾಗೂ ಉಮಾಪತಿ ಆತ್ಮೀಯರಾಗಿದ್ದಾರೆ.ಈ ಬೆಳವಣಿಗೆ ನಂತರ ದೂರುದಾರ ಮಹಿಳೆ ಹಾಗೂ ಶೀಲಾಗೋಪಾಲ್ ನಡುವೆ ಮನಸ್ಥಾಪವಾಗಿದೆ.ಮಹಿಳೆಯ ನಡುವಳಿಕೆ ಬಗ್ಗೆ ಶೀಲಾಗೋಪಾಲ್ ರವರು ಉಮಾಪತಿ ಬಳಿ ತಿಳಿಸಿದ್ದಾರೆ.ಈ ವೇಳೆ ಉಮಾಪತಿ ಆ ಮಹಿಳೆಗೆ ಫೋನ್ ಮಾಡಿ, ನೀನು ಬೇರೆಯವರ ಜೊತೆ ಸಂಬoಧ ಬೆಳೆಸಿದ್ದೀಯ,ನಾನು ಕರೆದಾಗ ಬರಬೇಕು ಎಂದು ಬೆದರಿಕೆ ಹಾಕಿದ್ದಾರೆ.ಆಗ ಮಹಿಳೆಯ ಮಗಳು ಉಮಾಪತಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ.ನಂತರ ವಿದೇಶದಲ್ಲಿ ತಂಗಿರುವ ಮತ್ತೊಬ್ಬ ಮಗಳ ಮೊಬೈಲ್ ಗೆ ಫೋನ್ ಮಾಡಿದ ಆತ, ನಾನು ಕೊಟ್ಟ ಹಣ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ತಾಯಿಯ ನಡುವಳಿಕೆಯ ವಾಯ್ಸ್ ರೆಕಾರ್ಡ್ ಗಳು ಹಾಗೂ ಫೋಟೋಗಳನ್ನ ಇಡೀ ಕುಟುಂಬಕ್ಕೆ ಕಳುಹಿಸಿ ಗೌರವಕ್ಕೆ ಧಕ್ಕೆ ಬರುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.ಸದ್ಯ ನೊಂದ ಮಹಿಳೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಉಮಾಪತಿ ಹಾಗೂ ಶೀಲಾ ಗೋಪಾಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!