IPL | ಈ ಬಾರಿ ಕನ್ನಡಿಗ ರಾಹುಲ್ ಐಪಿಎಲ್ ಆಡೋದು ಪಕ್ಕ: ಜಿಮ್​ನಲ್ಲಿ ಫುಲ್ ವರ್ಕೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

17ನೇ ಆವೃತ್ತಿಯ ಐಪಿಎಲ್ ಪ್ರಾರಂಭವಾಗಲು ಕೇವಲ ಎರಡು ವಾರಗಳು ಮಾತ್ರ ಉಳಿದಿವೆ. ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಟೂರ್ನಿಗೆ ಸಿದ್ಧತೆ ಆರಂಭಿಸಿವೆ. ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್ ಕೂಡ ಐಪಿಎಲ್‌ನಲ್ಲಿ ಆಡಲು ಎನ್‌ಸಿಎಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

ಮುಂದಿನ ವಾರದೊಳಗೆ ರಾಹುಲ್ ಫಿಟ್ ನೆಸ್ ಸಾಬೀತುಪಡಿಸಿದರೆ ಮಾತ್ರ ಐಪಿಎಲ್ ನಲ್ಲಿ ಆಡಲು ಬಿಸಿಸಿಐ ಅವಕಾಶ ನೀಡಲಿದೆ. ಹಾಗಾಗಿ ರಾಹುಲ್ ಜಿಮ್‌ನಲ್ಲಿ ತೀವ್ರ ಕಸರತ್ತು ಆರಂಭಿಸಿದ್ದು, ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿಶ್ವಾಸದಲ್ಲಿದ್ದಾರೆ. ಅವರ ತರಬೇತಿ ವಿಡಿಯೋ ನೋಡಿದರೆ ಐಪಿಎಲ್‌ಗೆ ಮರಳುವುದು ಖಚಿತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!