Tuesday, September 27, 2022

Latest Posts

ಅನುಮತಿ ಪಡೆಯದೆ ರಸ್ತೆ ತಡೆ:‌ ಪಿಎಫ್ ಐ ಕಾರ್ಯಕರ್ತರ ವಿರುದ್ಧ ಕೇಸ್

ಹೊಸದಿಗಂತ ವರದಿ ಉಡುಪಿ:

ಗುರುವಾರ ಸಂಜೆ ನಗರದ ಡಯಾನ ಸರ್ಕಲ್ ಬಳಿ ಅನುಮತಿ ಪಡೆಯದೇ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಮಾಡಿದ ಪಿ.ಎಫ್.ಐ ಕಾರ್ಯಕರ್ತರಿಗೆ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 ಜನ ಪಿ.ಎಫ್.ಐ ಕಾರ್ಯಕರ್ತರಾದ ಸಾದಿಕ್‌ ಅಹಮ್ಮದ್‌(40), ಅಫ್ರೋಜ್‌ ಕೆ (39), ಇಲಿಯಾಸ್‌ ಸಾಹೇಬ್‌(46), ಇರ್ಷಾದ್‌ (37), ಫಯಾಜ್‌ ಅಹಮ್ಮದ್‌(39), ಮಹಮ್ಮದ್‌ ಅಶ್ರಫ್‌(43), ಎ. ಹಾರೂನ್‌ ರಶೀದ್‌, ಮೊಹಮ್ಮದ್‌ ಜುರೈಜ್‌ (42), ಇಶಾಕ್‌ ಕಿದ್ವಾಯಿ (30), ಶೌಕತ್‌ ಅಲಿ (31), ಮಹಮ್ಮದ್‌ ಝಹೀದ್‌(24) ವಿರುದ್ದ ಪ್ರಕರಣ ದಾಖಲಾಗಿದೆ.

ಗುರುವಾರ ಪಿ.ಎಫ್.ಐ ಪ್ರಮುಖರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿರುವ ವಿಚಾರದ ಕುರಿತು ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ತಡೆ ಮಾಡಿದ್ದು, ಪೋಲಿಸರು ಲಾಠಿ ಚಾರ್ಚ್ ನಡೆಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!