Wednesday, September 28, 2022

Latest Posts

ಪ್ರಥಮ ವಿಕೆಟ್‌ ಗೆ 203 ರನ್‌ ಜೊತೆಯಾಟ! ಟಿ20 ಯಲ್ಲಿ ವಿಶ್ವದಾಖಲೆ ಬರೆದ ಬಾಬರ್-‌ ರಿಜ್ವಾನ್ ಜೋಡಿ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್‌
ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಪ್ರಥಮ ಟಿ 20 ಪಂದ್ಯವನ್ನು ಹೀನಾಯವಾಗಿ ಸೋತು ಭಾರೀ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ದ್ವಿತೀಯ ಟಿ20 ಯಲ್ಲಿ ಭರ್ಜರಿಯಾಗಿ ಕಮ್‌ ಬ್ಯಾಕ್‌ ಮಾಡಿದೆ.
ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಪಾಕ್‌ ಇಂಗ್ಲೆಂಡ್‌ ಒಡ್ಡಿದ್ದ 200 ರನ್​ಗಳ ಟಾರ್ಗೆಟ್ ಅನ್ನು ವಿಕೆಟ್ ನಷ್ಟವಿಲ್ಲದೆ ಗೆದ್ದು ಟಿ 20 ಯಲ್ಲಿ ಹೊಸ ವಿಶ್ವದಾಖಲೆ ಬರೆದಿದೆ. ಇತ್ತೀಚೆಗೆ ನಡೆದ ಏಷ್ಯಾಕಪ್‌ ನಲ್ಲಿ ಕಳಪೆ ಫಾರ್ಮ್​ನಿಂದ ಬಳಲಿದ್ದ ನಾಯಕ ಬಾಬರ್ ಅಜಮ್ ಅಮೋಘ ಶತಕ ಸಿಡಿಸುವ ಮೂಲಕ ಫಾರ್ಮ್​ಗೆ ಮರಳಿ ಪಡೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು. ನಾಯಕ ಮೊಯೀನ್ ಅಲಿ ಕೇವಲ 23 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್ ಗಳಿದ್ದ ಅಜೇಯ 55 ರನ್ ಚಚ್ಚಿದರೆ, ಡಕ್ಲೆಟ್ 43, ಹ್ಯಾರಿ ಬ್ರೂಕ್ಸ್ 31 ರನ್ ಸಿಡಿಸಿದರು.
ಗುರಿ ಬೆನ್ನತ್ತಿದ ಪಾಕ್‌ ಯಾವುದೇ ವಿಕೆಟ್‌ ನಷ್ಟವಿಲ್ಲದೆ  19.3 ಓವರ್‌ ಗಳಲ್ಲಿ 200 ರನ್‌ಗಳ ಗುರಿಯನ್ನು ತಲುಪಿತು. ಕೇವಲ 66 ಎಸೆತಗಳಲ್ಲಿ 11 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 110 ರನ್ ಚಚ್ಚಿದ ಬಾಬರ್ ಇಂಗ್ಲಿಷ್‌ ಬೌಲರ್‌ ಗಳ ಬೆವರಿಸಿಳಿಸಿದರು. ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಎರಡನೇ ಬ್ಯಾಟ್ಸ್‌ ಮನ್‌ ಎಂಬ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕ್ಯಾಪ್ಟನ್‌ ಗೆ ತಕ್ಕ ಸಾಥ್‌ ನೀಡಿದ ಮತ್ತೊಬ್ಬ ಆರಂಭಿಕ ರಿಜ್ವಾನ್ 51 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಬಾಬರ್- ರಿಜ್ವಾನ್ ಜೋಡಿ ಟಿ 20 ಚೇಸಿಂಗ್‌ ವೇಳೆ ವಿಕೆಟ್‌ ನಷ್ಟವಿಲ್ಲದೆ ಅತ್ಯಧಿಕ ಜೊತೆಯಾಟವಾಡಿದ ವಿಶ್ವದಾಖಲೆಯನ್ನು ಬರೆದಿದೆ. ಜೊತೆಗೆ ಇದು T20I ಗಳಲ್ಲಿ ಯಾವುದೇ ವಿಕೆಟ್‌ಗೆ ಐದನೇ ಅತ್ಯುನ್ನತ ಜೊತೆಯಾಟವಾಗಿದೆ. ಈ ಮೂಲಕ ಪಾಕ್ ‌ಆಂಗ್ಲರ ವಿರುದ್ಧ 7 ಪಂದ್ಯಗಳ T20 ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!