ಟ್ರಾಫಿಕ್ ರೂಲ್ಸ್‌ಬಗ್ಗೆ ತನ್ನ ಚಾಲಕರಿಗೆ ತರಬೇತಿ ನೀಡಲಿದೆ ಬಿಎಂಟಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಚಾರ ನಿಯಮ ಉಲ್ಲಂಘನೆ ಕಾರಣದಿಂದ ಬಿಎಂಟಿಸಿ ಭಾರೀ ಮೊತ್ತದ ಫೈನ್‌ನ್ನು ಸರ್ಕಾರಕ್ಕೆ ಕಟ್ಟಿದ್ದು, ಇದೀಗ ತಮ್ಮ ಚಾಲಕರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತರಬೇತಿ ನೀಡಲು ಮುಂದಾಗಿದೆ.

ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಶೇ.50ರಷ್ಟು ರಿಯಾಯಿತಿ ಪಡೆದ ನಂತರ ಸಂಚಾರ ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 33 ಲಕ್ಷ ರೂ.ಗಳ ಭಾರೀ ದಂಡವನ್ನು ಪಾವತಿಸಲಾಗಿತ್ತು.

ಇದೀಗ ಚಾಲಕರಿಗೆ ತರಬೇತಿ ಹಾಗೂ ನಿಯಮಗಳಿಗೆ ಬದ್ಧರಾಗಿರುವಂತೆ ಜಾಗೃತಿ ಮೂಡಿಸಲು ಬಿಎಂಟಿಸಿ ಮುಂದಾಗಿದೆ. ಸಿಗ್ನಲ್ ಜಂಪಿಂಗ್ ಹಾಗೂ ಸರಿಯಾದ ಜಾಗದಲ್ಲಿ ಪಾರ್ಕಿಂಗ್ ಮಾಡದ ಕಾರಣ ಹೆಚ್ಚು ಫೈನ್ ಬಿದ್ದಿದೆ ಎನ್ನಲಾಗಿದೆ. ಚಾಲಕರಿಗೆ ಹೆಚ್ಚು ತರಬೇತಿ ನೀಡುವ ಅವಶ್ಯವಿದೆ ಎಂದು ಬಿಎಂಟಿಸಿ ಹೇಳಿದ್ದು, ಸದ್ಯವೇ ತರಬೇತಿ ಆರಂಭಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!