ಹೈದರಾಬಾದ್‌ನ ಟಿಂಬರ್ ಡಿಪೋದಲ್ಲಿ ಭಾರೀ ಅಗ್ನಿ ಅವಘಡ : ಅಗ್ನಿಶಾಮಕ ದಳ ದೌಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹೈದರಾಬಾದ್‌ನ ರಾಜೇಂದ್ರ ನಗರದ ಅತ್ತಾಪುರದ ಎಂಎಂ ಪ್ರದೇಶದಲ್ಲಿ ಮರಗಳನ್ನು ಇರಿಸಲಾಗಿದ್ದ ಟಿಂಬರ್ ಡಿಪೋದಲ್ಲಿ ಭಾನುವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ದೃಢಪಟ್ಟಿಲ್ಲ, ಆದರೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ಇದೆ.

ಘಟನಾ ಸ್ಥಳಕ್ಕೆ ಬೆಂಕಿ ನಂದಿಸಲು ಕನಿಷ್ಠ 7-8 ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತು.
ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಸಂಭವಿಸಿದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!