Thursday, March 30, 2023

Latest Posts

OSCAR| ನಾಟು ನಾಟು ಹಾಡಿಗೆ ಒಲಿದು ಬಂತು ಆಸ್ಕರ್: ಸೌತ್ ಸಿನಿಮಾಗಳು ಎಲ್ಲೆಡೆ ಶೈನಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲವು ವರ್ಷಗಳ ಕನಸು ನನಸಾಗಿದೆ. ವಿಶ್ವ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ನಮ್ಮ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ಹಾಡಿಗೆ ದಕ್ಕಿದೆ. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್ ಮತ್ತು ಎನ್ಟಿಆರ್ ಅಭಿನಯದ RRR ಚಿತ್ರದ ʻನಾಟು ನಾಟುʼ ಹಾಡು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರಾಜಮೌಳಿ ಮಾರ್ಗದರ್ಶನದಲ್ಲಿ ಚಂದ್ರಬೋಸ್ ಅವರ ಸಾಹಿತ್ಯ ಮತ್ತು ಕೀರವಾಣಿ ಅವರ ಸಂಗೀತವು ಪದಗಳಿಗೆ ಜೀವ ತುಂಬಿದೆ. ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ ಅವರ ಕಂಠದಿಂದ ನಾಟು ನಾಟು ಹಾಡು ಹೊರಬಂದು ಮಾಸ್ಟರ್ ಪ್ರೇಮ್ ರಕ್ಷಿತ್ ಸಂಯೋಜಿಸಿದ ಸ್ಟೆಪ್‌ಗಳಿಗೆ ಚರಣ್ ಮತ್ತು ತಾರಕ್ ಡ್ಯಾನ್ಸ್ ಮಾಡಿದ್ದು ಇಡೀ ಜಗತ್ತೇ ಮೆಚ್ಚುವಂತೆ ಮಾಡಿದೆ.

ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಐದು ಹಾಡುಗಳು ನಾಮನಿರ್ದೇಶನಗೊಂಡರೆ RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪಡೆದರು. ನಾಟು ನಾಟು ಹಾಡು ಭಾರತದ ಮೊದಲ ಹಾಡು ಮತ್ತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ತೆಲುಗು ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಪ್ರಶಸ್ತಿಯು ಹೊಸ ಇತಿಹಾಸವನ್ನು ಸೃಷ್ಟಿಸಿತು.

ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸುತ್ತಿದ್ದಂತೆ RRR ಯೂನಿಟ್ ಖುಷಿಯಲ್ಲಿ ಮುಳುಗಿತ್ತು. ಸಂಭ್ರಮಿಸಲು ಚಿತ್ರತಂಡ ಸಜ್ಜಾಗಿದೆ. ದೇಶದೆಲ್ಲೆಡೆ RRR ಯೂನಿಟ್, ರಾಜಮೌಳಿ, ಕೀರವಾಣಿ, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್, ಕಾಲ ಭೈರವ, ಪ್ರೇಮ್ ರಕ್ಷಿತ್ ಮಾಸ್ಟರ್, ಹಾಡು ಮತ್ತು ಸಿನಿಮಾದಲ್ಲಿ ನಟಿಸಿದ ಎಲ್ಲರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮುಂಜಾನೆ ಇಡೀ ದೇಶವೇ ಶುಭ ಸುದ್ದಿಯೊಂದನ್ನು ಕೇಳಿದೆ ಎಂದು ಎಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಅಭಿಮಾನಿಗಳು, ನಾಟು ನಾಟು ಸಾಂಗ್ ಆಸ್ಕರ್ ಯಶಸ್ಸಿಗೆ ಪ್ರೇಕ್ಷಕರು ಮತ್ತು ಸಿನಿಪ್ರೇಮಿಗಳು ಖುಷಿ ಪಡುತ್ತಿದ್ದಾರೆ. ರಾಜಮೌಳಿ ಅವರ ಮಾರ್ಗದರ್ಶನದಲ್ಲಿ  ತೆಲುಗು ಹಾಡು ಮತ್ತು ತೆಲುಗು ಸಾಹಿತ್ಯ ಇಂದು ವಿಶ್ವದ ಅತ್ಯುತ್ತಮ ಸಿನಿಮಾ ವೇದಿಕೆಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಹೆಮ್ಮೆಯಿಂದ ಗೆದ್ದು ನಮ್ಮ ಭಾರತವನ್ನು ಸಿನಿಮಾವನ್ನು ಕಲಾ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!