SHOCKING NEWS| ಚಿತ್ರರಂಗಕ್ಕೆ ಆಘಾತ: ಶೂಟಿಂಗ್ ವೇಳೆಯೇ ಇಹಲೋಕ ತ್ಯಜಿಸಿದ ಖ್ಯಾತ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳ ಚಿತ್ರರಂಗದ ಅದ್ಭುತ ಪ್ರತಿಭೆ, ನಟ ವಿಪಿ ಖಾಲಿದ್, ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆಯೇ  ವಿಧಿವಶರಾಗಿದ್ದಾರೆ.
ಫೋರ್ಟ್ ಕೊಚ್ಚಿಯ ಚುಲ್ಲಿಕಲ್ ನಿವಾಸಿ,70 ವರ್ಷ ಪ್ರಾಯದ ಖಾಲಿದ್ ವೈಕಂನಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ.
ರಂಗಭೂಮಿ ನಟರಾಗಿದ್ದ ಖಾಲಿದ್, ಪೆರಿಯಾರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಕೊಚ್ಚಿನ್ ನಾಗೇಶ್ ಎಂದೇ ಮೊದಲು ಗುರುತಿಸಿಕೊಂಡ ಅವರು, ಅನೇಕ ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರಲ್ಲದೆ, ಧಾರಾವಾಹಿಯಲ್ಲೂ ನಟಿಸುವ ಮೂಲಕ ಕಿರುತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಖಾಲಿದ್ ಮೃತದೇಹವನ್ನು ವೈಕಂನ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು,  ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!