ಡಯಟ್ ಫಾಲೋ ಮಾಡ್ತಿರುವಾಗ ಒಮ್ಮೆ ಪಿಜ್ಜಾ, ಬರ್ಗರ್ ಅಥವಾ ಸಿಹಿ ತಿಂದ್ರೆ ಹಲವರಿಗೆ ಗಿಲ್ಟ್ ಫೀಲ್ ಶುರುವಾಗುತ್ತೆ. “ಇಷ್ಟು ದಿನ ಮಾಡಿದ ಡಯಟ್ ಒಂದೇ ದಿನದಲ್ಲಿ ಹಾಳಾಯ್ತು” ಅನ್ನೋ ಭಾವನೆ ಬರುತ್ತದೆ. ಆದರೆ ನಿಜ ಹೇಳಬೇಕಾದರೆ, ಒಂದು ಚೀಟ್ ಮೀಲ್‌ನಿಂದ ನಿಮ್ಮ ಸಂಪೂರ್ಣ ಫಿಟ್ನೆಸ್ ಜರ್ನಿ ಹಾಳಾಗೋದಿಲ್ಲ.
ಒಂದು ಮೀಲ್ ಎಲ್ಲವನ್ನೂ ಬದಲಿಸೋದಿಲ್ಲ
ತೂಕ ಹೆಚ್ಚೋದು ಅಥವಾ ಕಡಿಮೆಯಾಗೋದು ಒಂದು ದಿನದಲ್ಲಿ ಆಗೋದಿಲ್ಲ. ಹೇಗೆ ಒಂದು ದಿನ ಜಿಮ್ ಹೋದ್ರೆ ತಕ್ಷಣ ಸಿಕ್ಸ್ ಪ್ಯಾಕ್ ಬರೋದಿಲ್ಲವೋ, ಹಾಗೆಯೇ ಒಂದು ಚೀಟ್ ಮೀಲ್‌ನಿಂದ ಫ್ಯಾಟ್ ಕೂಡ ತಕ್ಷಣ ಹೆಚ್ಚಾಗೋದಿಲ್ಲ.
ಗಿಲ್ಟ್ ಫೀಲ್ ಬೇಡ
ಚೀಟ್ ಮೀಲ್ ತಿಂದ ಮೇಲೆ ಹಲವರು “ಇವತ್ತೇ ಹಾಳಾಯ್ತು” ಅಂತ ಮತ್ತಷ್ಟು ಜಂಕ್ ಫುಡ್ ತಿನ್ನುತ್ತಾರೆ. ಇದೇ ದೊಡ್ಡ ತಪ್ಪು. ಒಂದು ಮೀಲ್ ಬಳಿಕ ಮತ್ತೆ ನಿಮ್ಮ ರೂಟೀನ್‌ಗೆ ಮರಳಿದ್ರೆ ಸಾಕು.
ಇದನ್ನೂ ಓದಿ:
ಬ್ಯಾಲೆನ್ಸ್ ಮುಖ್ಯ
ಫಿಟ್ನೆಸ್ ಅಂದ್ರೆ ಜೀವನಪೂರ್ತಿ ಕಠಿಣ ಡಯಟ್ ಅಲ್ಲ. ಕೆಲವೊಮ್ಮೆ ಇಷ್ಟದ ಆಹಾರ ತಿನ್ನೋದು ಮನಸ್ಸಿಗೂ ರಿಲೀಫ್ ಕೊಡುತ್ತದೆ. ಇದರಿಂದ ಡಯಟ್ ಮುಂದುವರಿಸೋದು ಸುಲಭವಾಗಬಹುದು.
ಪ್ರಮಾಣ ಕಂಟ್ರೋಲ್ ಇರಲಿ
ಚೀಟ್ ಮೀಲ್ ಅಂದ್ರೆ ಅತಿಯಾಗಿ ತಿನ್ನೋದು ಅಲ್ಲ. ಇಷ್ಟದ ಆಹಾರವನ್ನು ಮಿತಿಯಲ್ಲಿ ಸವಿಯೋದು ಉತ್ತಮ.
ಫಿಟ್ನೆಸ್ ಜರ್ನಿಯಲ್ಲಿ ಪರಿಪೂರ್ಣತೆ ಬೇಡ… ನಿರಂತರತೆ ಮುಖ್ಯ. ಒಂದು ದಿನದ ಚೀಟ್ ಮೀಲ್ ನಿಮ್ಮ ಪ್ರೋಗ್ರೆಸ್ ಹಾಳು ಮಾಡೋದಿಲ್ಲ, ಆದರೆ ಅದನ್ನೇ ಹ್ಯಾಬಿಟ್ ಮಾಡ್ಕೊಂಡ್ರೆ ಮಾತ್ರ ಸಮಸ್ಯೆ.



