ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಳಿ 260 ಕೋಟಿ ಮೌಲ್ಯದ ಖಾಸಗಿ ಜೆಟ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯ ಸ್ಟ್ರೀನ್ ಶಾಟ್ ಶೇರ್ ಮಾಡಿ, ‘ಲೈಯರ್..ಲೈಯರ್ ಪ್ಯಾಂಟ್ಸ್ ಆನ್ ಫೈರ್. ಈ ಪದ್ಯವನ್ನು ಬಾಲ್ಯದಲ್ಲಿ ಕೇಳಿದ್ದೆ’ ಎನ್ನುವ ಸಾಲಿನ ಮೂಲಕ ಪ್ರಾರಂಭ ಮಾಡಿದ ಅಕ್ಷಯ್, ಕೆಲವು ಜನರು ಸರಿಯಾಗಿ ಬೆಳೆದು ಬಂದಿಲ್ಲ. ಆದರೆ ನಾನು ಸುಮ್ಮನೆ ಬಿಟ್ಟು ಬಿಡುವ ವನಸ್ಥಿತಿಯವನಲ್ಲ. ನನ್ನ ಬಗ್ಗೆ ಅಧಾರ ರಹಿತ ಸುದ್ದಿಗಳನ್ನು ಬರೆದರೆ ನಾನು ಅದನ್ನು ಬಿಡಲ್ಲ. ಬಯಲಿಗೆ ಎಳೆಯುತ್ತೇನೆ’ ಎಂದು ಹೇಳಿದ್ದಾರೆ.
ಈ ಮೂಲಕ ಅಕ್ಷಯ್ ಬಳಿ ದುಬಾರಿ ಜೆಟ್ ಇದೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಅಕ್ಷಯ್ ಕುಮಾರ್ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!