Saturday, June 10, 2023

Latest Posts

ಶೂಟಿಂಗ್ ವೇಳೆ ಬಾಲಿವುಡ್ ನಟ ಅನುಪಮ್ ಖೇರ್ ಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ‘ವಿಜಯ್ 69’ (Vijay 69) ಸಿನಿಮಾ ಶೂಟಿಂಗ್ ವೇಳೆ ಅವರ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ.

ಕನ್ನಡದ ‘ಘೋಸ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿರುವ ಖ್ಯಾತ ನಟ ಅನುಪಮ್ ಅವರಿಗೆ ‘ವಿಜಯ್ 69’ ಸಿನಿಮಾ ಚಿತ್ರೀಕರಣದ ವೇಳೆ ಭುಜಕ್ಕೆ ಗಾಯವಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!