NATO ಸಿಬ್ಬಂದಿಗಳ ಸಾಧನಗಳಿಂದ ಟಿಕ್ ಟಾಕ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ನ್ಯಾಟೋ ತನ್ನ ಸಿಬ್ಬಂದಿಗೆ ಒದಗಿಸುವ ಸಾಧನಗಳಿಂದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್ ಟಾಕ್’ನ್ನ ಭದ್ರತಾ ಕಾರಣಗಳನ್ನ ಉಲ್ಲೇಖಿಸಿ ಅಧಿಕೃತವಾಗಿ ನಿಷೇಧಿಸಿದೆ.

ಈ ಕುರಿತು ನ್ಯಾಟೋ ಅಧಿಕಾರಿಗಳು ದೃಢಪಡಿಸಿದ್ದು, ಟಿಕ್ ಟಾಕ್ ನಿಷೇಧವನ್ನ ಘೋಷಿಸಿ ನ್ಯಾಟೋ ಅಧಿಕಾರಿಗಳು ಶುಕ್ರವಾರ ಸಿಬ್ಬಂದಿಗೆ ಮಾಹಿತಿಯನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಸೈಬರ್ ಸುರಕ್ಷತೆಯು ನ್ಯಾಟೋಗೆ ಮೊದಲ ಆದ್ಯತೆಯಾಗಿದೆ. ಅಧಿಕೃತ ವ್ಯವಹಾರ ಬಳಕೆಗಾಗಿ ಅಪ್ಲಿಕೇಶನ್ ‘ಗಳನ್ನ ನಿರ್ಧರಿಸಲು ನ್ಯಾಟೋ ದೃಢವಾದ ಅವಶ್ಯಕತೆಗಳನ್ನ ಹೊಂದಿದೆ. ಈಗ ನ್ಯಾಟೋ ಸಾಧನಗಳಲ್ಲಿ ಟಿಕ್ ಟಾಕ್ ಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಹಿರಿಯ ನ್ಯಾಟೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!