ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆ ಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದು, ಹಲವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಣತೆಗಳ ಮುಂದೆ ಟಾಪ್ ಲೆಸ್ ಆಗಿ ಕಪ್ ಕೇಕ್ ತಿನ್ನುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಹಾಕಿಕೊಂಡಿದ್ದು, ಎರಡು ಕೆಂಪು ಹೃದಯದ ಎಮೋಜಿಗಳೊಂದಿಗೆ ’ಎಲ್ಲರಿಗೂ ದೀಪಾವಳಿ’ ಎಂದು ಬರೆದುಕೊಂಡಿದ್ದಾರೆ. ದೀಪಾವಳಿ ಎಂಬುದು ಹಿಂದುಗಳಿಗೆ ವಿಶೇಷ ಹಾಗೂ ಪವಿತ್ರ ಹಬ್ಬವಾಗಿದೆ. ಆದರೆ, ಉರ್ಫಿ ಇಂತಹಾ ಚಿತ್ರಗಳನ್ನು ಬಳಸಿ ಹಿಂದುಗಳ ಭಾವನೆಗೆ, ಶ್ರದ್ಧೆಗೆ ಅಗೌರವ ತಂದಿದ್ದಾರೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದು, ಟ್ವಿಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.