ಈ ರೀತಿನಾ ಸೀರೆ ಉಡೋದು? ಉರ್ಫಿ ಜಾವೇದ್ ಮೇಲೆ ಬಿತ್ತು ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉರ್ಫಿ ಜಾವೇದ್ ದಿನಕ್ಕೊಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾರೆ.
ಕೆಲವೊಮ್ಮೆ ವೈರ್ ಮೈಗೆ ಸುತ್ತಿಕೊಂಡು ಬಟ್ಟೆ ಮಾಡಿಕೊಳ್ಳುತ್ತಾರೆ, ಇನ್ನೊಮ್ಮೆ ಕಾಟನ್ ಕ್ಯಾಂಡಿ ಮೈಗೆ ಸುತ್ತಿಕೊಳ್ಳುತ್ತಾರೆ.

ಹಾಟ್​ ಆಗಿ ಬಟ್ಟೆ ಧರಿಸುವ ಮೂಲಕ ನಟಿ ಉರ್ಫಿ ಜಾವೇದ್​ ಅವರು ಸುದ್ದಿ ಆಗುತ್ತಾರೆ. ಅನೇಕ ಬಾರಿ ಅವರು ಟ್ರೋಲ್​ ಆಗಿದ್ದುಂಟು. ಆದರೂ ಉರ್ಫಿ ಹಾಟ್​ನೆಸ್​ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಸೀರೆ ಕೂಡ ಹಾಟ್ ಆಗಿಯೇ ಹಾಕುತ್ತಾರೆ. ಆದರೆ ಈ ಬಾರಿ ಅವರು ಸೀರೆ ಉಟ್ಟ ರೀತಿಗೆ ಕೇಸ್ ಬಿದ್ದಿದೆ. ಹಾಯ್ ಹಾಯ್ ಯೇ ಮಜ್ಬೂರಿ ಎನ್ನುವ ಆಲ್ಬಮ್ ಹಾಡಿಗೆ ಉರ್ಫಿ ನೃತ್ಯ ಮಾಡಿದ್ದು, ಇದು ಅಶ್ಲೀಲವಾಗಿದೆ ಎಂದು ಕೇಸ್ ದಾಖಲಿಸಲಾಗಿದೆಯಂತೆ. ಇದಕ್ಕೆ ಜಾವೇದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಗ್‌ಬಾಸ್ ಒಟಿಟಿಯಲ್ಲಿ ಸದ್ದು ಮಾಡಿದ್ದ ಉರ್ಫಿ ಅದಾದ ನಂತರ ಸಿಕ್ಕಾಪಟ್ಟೆ ಫೇಮಸ್ ಆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!