ಅಯೋಧ್ಯೆಗೆ ಭೇಟಿ ನೀಡಿ ರಾಮಲಲಾನ ದರುಶನ ಪಡೆದ ಬಾಲಿವುಡ್ ಜೋಡಿ ರಿತೇಶ್ ದೇಶ್‌ಮುಖ್, ಜೆನಿಲಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದಾಗಿನಿಂದಲೂ ದೇಶದ ಮೂಲೆ ಮೂಲೆಯಿಂದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮಲಲಾನ ದರುಶನ ಪಡೆಯುತ್ತಿದ್ದಾರೆ. ಈ ಸರದಿಗೆ ಸೆಲೆಬ್ರಿಟಿಗಳು ಕೂಡ ಸೇರಿದ್ದು, ರಾಮ ದರುಶನ ಪಡೆದು ಪುನೀತರಾಗುತ್ತಿದ್ದಾರೆ.

ಇದೀಗ ಬಾಲಿವುಡ್ ನಟಿ ಜೆನಿಲಿಯಾ ಹಾಗೂ ಪತಿ ನಟ ರಿತೇಶ್ ದೇಶ್‌ಮುಖ್ ಸರದಿ. ಬಾಲಿವುಡ್ ನ ಈ ಜೋಡಿ ಜೊತೆಯಾಗಿ ಅಯೋಧ್ಯೆಗೆ ಭೇಟಿ ನೀಡಿ ರಾಮಲಲಾನ ದರುಶನ ಪಡೆದಿದ್ದಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್ ಧರ್ಮ ಬೇರೆ ಬೇರೆಯಾದರೂ ಧೈರ್ಯವಾಗಿ ಪ್ರೀತಿಸಿ ಮದುವೆಯಾಗಿ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.
ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರು.

ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ನಿನ್ನ ನಾಮವೂ ಮಂತ್ರಕ್ಕಿಂತಲೂ ಹೆಚ್ಚು ಜೈಶ್ರೀರಾಮ್ ಎಂದು ಬರೆದುಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ ಡಿಸೋಜಾ (Genelia Dsouza) ಬಾಲಿವುಡ್‌ನ (Bollywood) ಕ್ಯುಟ್‌ ಜೋಡಿಗಳಲ್ಲಿ ಒಂದಾಗಿದ್ದು, ಫೆಬ್ರವರಿ 3, 2012 ರಂದು ಮುಂಬೈನಲ್ಲಿ ಮರಾಠಿ ಸಂಪ್ರದಾಯದ ಪ್ರಕಾರ ತುಂಬಾ ಗ್ರ್ಯಾಂಡ್‌ ಆಗಿ ಇವರು ವಿವಾಹವಾಗಿದ್ದು,ಇಬ್ಬರು ಮಕ್ಕಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!