ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಲ್ಲಿ ಸಣ್ಣ ಚಿತ್ರಗಳಿಂದ ಶುರುವಾಗಿ ಅದ್ಧೂರಿ ಚಿತ್ರಗಳನ್ನು ಮಾಡಿದ ಕಾರ್ತಿಕ್ ಆರ್ಯನ್ ಈಗ ಸ್ಟಾರ್ ಹೀರೋ ರೇಂಜ್ ಗೆ ಏರಿದ್ದಾರೆ. ಕಾರ್ತಿಕ್ ಆರ್ಯನ್ ಗೆ ಬಾಲಿವುಡ್ ನಲ್ಲಿ ಒಳ್ಳೆಯ ಫಾಲೋಯಿಂಗ್ ಇದೆ. ಭೂಲ್ ಭುಲಯ್ಯ 2 ಚಿತ್ರದ ಮೂಲಕ ದೊಡ್ಡ ಹಿಟ್ ಗಳಿಸಿದ ಕಾರ್ತಿಕ್ ಆರ್ಯನ್ ಶೀಘ್ರದಲ್ಲೇ ಶೆಹಜಾದಾ ಜೊತೆ ಬರಲಿದ್ದಾರೆ. ಶೆಹಜಾದಾ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಅಲವೈಕುಂಠಪುರಂನ ರಿಮೇಕ್ ಆಗಿದ್ದು, ಫೆಬ್ರವರಿ 17 ರಂದು ತೆರೆಗೆ ಬರಲಿದೆ.
ಸದ್ಯ ಕಾರ್ತಿಕ್ ಆರ್ಯನ್ ಶೆಹಜಾದಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಚಾರದ ಭಾಗವಾಗಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರೀತಿಯ ಬಗ್ಗೆ ಮಾತನಾಡಿ, ಸದ್ಯ ನಾನು ನನ್ನ ನಾಯಿ ಕಟೋರಿಯನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನ್ನ ನಾಯಿಯಂತೆ ನನ್ನನ್ನು ಬೇಷರತ್ತಾಗಿ ಪ್ರೀತಿಸುವ ವ್ಯಕ್ತಿ ನನಗೆ ಬೇಕು. ಹಾಗೆ ಪ್ರೀತಿಸುವ ಹುಡುಗಿಯರು ಎಲ್ಲಿಯೂ ಸಿಕ್ಕಿಲ್ಲ. ಅದಕ್ಕೇ ನಾನು ಯಾರನ್ನೂ ಪ್ರೀತಿಸೋಲ್ಲ. ಹುಡುಗಿಯರು ನೀಡಲು ಸಾಧ್ಯವಾಗದ ಬೇಷರತ್ತಾದ ಪ್ರೀತಿಯನ್ನು ನನ್ನ ನಾಯಿ ನೀಡುತ್ತದೆ ಎಂದರು.
ಕಾರ್ತಿಕ್ ಆರ್ಯನ್ ಅವರ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರ್ತಿಕ್ ಅವರ ಕಾಮೆಂಟ್‌ಗಳಿಗೆ ಎಲ್ಲರೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹುಡುಗಿಯರ ಫ್ಯಾನ್ ಫಾಲೋಯಿಂಗ್ ಇರುವ ಕಾರ್ತಿಕ್‌ಗೆ ಈ ಮಾತುಗಳು ಪ್ಲಸ್ ಆಗುತ್ತಾ ಮೈನಸ್ ಆಗುತ್ತಾ ನೋಡಬೇಕು.