ಬಿಬಿಸಿ ಕಚೇರಿಗಳಲ್ಲಿ ಮೂರನೇ ದಿನವೂ ಮುಂದುವರಿದ ಐಟಿ ಸಮೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಬಿಸಿ ಕಚೇರಿಗಳಲ್ಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗಳು ಮೂರನೇ ದಿನವೂ ಮುಂದುವರೆದಿದೆ. ಆದಾಯ ತೆರಿಗೆ ಇಲಾಖೆಯು ಗುರುವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಇಂಡಿಯಾ ಕಚೇರಿಗಳಲ್ಲಿ ಮೂರನೇ ದಿನವಾದ ಸಮೀಕ್ಷೆ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ತೆರಿಗೆ ವಂಚನೆ ಆರೋಪದ ತನಿಖೆಯ ಭಾಗವಾಗಿ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಬಿಸಿ ಸಂಸ್ಥೆಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಐಟಿ ಅಧಿಕಾರಿಗಳ ಸಮೀಕ್ಷೆ ಕಾರ್ಯಾಚರಣೆಗಳು ಆರಂಭಗೊಂಡಿತ್ತು. ತರುವಾಯ ಬುಧವಾರವೂ ಈ ಸಮೀಕ್ಷೆ ಮುಂದುವರೆದಿದ್ದು, ಇದೀಗ ಮೂರನೆ ದಿನಕ್ಕೆ ಕಾಲಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!