ಹೆರಾ ಫೇರಿ-3 ಸಿನಿಮಾದಿಂದ ಬಾಲಿವುಡ್ ಕಿಲಾಡಿ ಔಟ್: ಈ ಕುರಿತು ಅಕ್ಷಯ್ ಕುಮಾರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅಭಿನಯದ ಇತ್ತೀಚಿನ ಸಿನಿಮಾಗಳು ಕಮಾಲ್ ಮಾಡುತ್ತಿಲ್ಲ. ಇದರಿಂದ ನಿರ್ದೇಶಕರು ಅಕ್ಷಯ ಅನ್ನು ಹಾಕಿ ಸಿನಿಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆಅಕ್ಷಯ್ ಕುಮಾರ್ ಬಹುನಿರೀಕ್ಷೆಯ ಹೆರಾ ಫೇರಿ-3 ಸಿನಿಮಾದಿಂದ ಔಟ್ ಆಗಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.ಜೊತೆಗೆ ಸ್ವತಃ ಅಕ್ಷಯ್ ಕುಮಾರ್ ಅವರಿಗೂ ದುಃಖವಾಗಿದೆ

ಹೆರಾ ಫೇರಿ ಮೊದಲು ಮತ್ತು ಎರಡನೇ ಸರಣಿಯಲ್ಲಿ ಸುನಿಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದರು. ಇಂಡಿಯಾದಲ್ಲೇ ಈ ಜೋಡಿ ಮೆಚ್ಚುಗೆ ಪಡೆದಿತ್ತು. ಎಷ್ಟು ಅಂದರೆ ಇವತ್ತಿಗೂ ಈ ಸಿನಿಮಾಗಳ ಮೀಮ್ ಮತ್ತು ಡೈಲಾಗ್ ಗಳು ವೈರಲ್ ಆಗುತ್ತಲೇ ಇರುತ್ತೆ. ಆದರೆ ಈ ಸಿನಿಮಾದ ಸರಣಿಯಿಂದ ಈಗ ಕಿಲಾಡಿ ಹೊರಬಂದಿದ್ದು, ಬಾಲಿವುಡ್‌ನ ಮತ್ತೋರ್ವ ನಟ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟಿದ್ದಾರೆ.

ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅಕ್ಷಯ್ , ಹೆರಾ ಫೇರಿ-3 ಸಿನಿಮಾದಿಂದ ಹೊರ ಹೋಗಿರುವುದು ನನಗೂ ತುಂಬಾ ದುಃಖವಿದೆ ಎಂದು ಹೇಳಿದ್ದಾರೆ.

‘ನನಗೆ ಈ ಚಿತ್ರದ ಆಫರ್ ಬಂದಿತು ಮತ್ತು ಈ ಸಿನಿಮಾದ ಬಗ್ಗೆ ತಿಳಿಸಲಾಯಿತು. ಆದರೆ ಚಿತ್ರಕಥೆ, ಸ್ಕ್ರೀನ್ ಪ್ಲೇ, ನನಗೆ ತೃಪ್ತಿಯಾಗಲಿಲ್ಲ, ಸಂತೋಷವಾಗಲಿಲ್ಲ. ಜನರು ಏನನ್ನು ನೋಡಲು ಬಯಸುತ್ತಾರೋ ಅದನ್ನು ನಾನು ಮಾಡಬೇಕು ಮತ್ತು ಅದಕ್ಕಾಗಿಯೇ ನಾನು ಹಿಂದೆ ಸರಿದಿದ್ದೇನೆ. ಆದರೂ ಈ ಸಿನಿಮಾ ನನಗೆ, ಒಂದು ಭಾಗವಾಗಿದೆ, ನನ್ನ ಜೀವನ, ನನ್ನ ಪ್ರಯಾಣ. ಹಾಗಾಗಿ ನನಗೂ ತುಂಬಾ ಬೇಸರವಾಗಿದೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!