ಪತ್ನಿ ಮೇಲೆ ಕಾರು ಹರಿಸಿದ ನಿರ್ಮಾಪಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಪತ್ನಿ ಮೇಲೆ ಕೊಲೆ ಯತ್ನ ಕೇಸ್‌ನಡಿ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಕೌಟುಂಬಿಕ ವಿಚಾರದಲ್ಲಿ ಕಮಲ್ ಮತ್ತು ಅವರ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಈ ನಿರ್ಮಾಪಕ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದ್ದು, ಈ ಘಟನೆಯಿಂದ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಕಮಲ್ ಕಿಶೋರ್ ಅವರ ಪತ್ನಿ ಅಂಬೋಲಿ ಅವರು ಮಹಾರಾಷ್ಟ್ರದ ಅಂಧೇರಿಯಲ್ಲಿರುವ ವಸತಿ ಕಟ್ಟಡದಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಇದ್ದಾರೆ ಎಂದು ತಿಳಿದು ಅಲ್ಲಿಗೆ ಬಂದಿದ್ದಾರೆ. ಪತ್ನಿಯನ್ನು ನೋಡಿದ ಕೂಡಲೇ ಪರಾರಿಯಾಗಲು ಯತ್ನಿಸಿದ ಅವರು ಎದುರಿದ್ದ ಅವರ ಮೇಲೆ ಕಾರು ಹರಿಸಿದ್ದಾರೆ.

ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಸಂಪೂರ್ಣ ಘಟನೆ ನಡೆದಿದೆ. ಕಾರು ಹರಿದಿದ್ದರಿಂದ ಮಿಶ್ರಾ ಅವರ ಪತ್ನಿಯ ಕಾಲು ಮತ್ತು ತಲೆಗೆ ಗಾಯಗಳಾಗಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ಆದ್ದರಿಂದ ಪೊಲೀಸರು ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಸೆಕ್ಷನ್ 279 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!