ಫ್ಯಾಷನ್‌ ತಂದ ಅವಾಂತರ: ಹೇರ್‌ ಸ್ಟೈಲ್‌ ಮಾಡಿಸಲು ಹೋಗಿ ಯುವಕನ ಪರದಾಟ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಫ್ಯಾಷನ್‌ ಎಂಬುದು ಇಂದಿನ ದಿನಮಾನದ ಅಗತ್ಯತೆ ಎಂಬಂತಾಗಿ ಹೋಗಿದೆ. ಆದರೆ ಈ ಪ್ಯಾಷನ್‌ ಮಾಡಿಕೊಳ್ಳಲು ಹೋಗಿ ಅನೇಕ ಅವಾಂತರಗಳೇ ನಡೆದ ಉದಾಹರಣೆಗಳನ್ನು ನೀವು ಆಗಿಗೊಮ್ಮೆ ಕೇಳಿರುತ್ತೀರಿ, ನೋಡಿಯೂ ಇರುತ್ತೀರಿ. ಇಲ್ಲೊಂದು ವಿಡಿಯೋ ಅಂತಹುದೇ ಅನಾಹುತದ ತಾಜಾ ಉದಾಹರಣೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ʼಫೈರ್‌ ಹೇರ್ಕಟ್‌ʼ ಟ್ರೆಂಡ್‌ ಆಗುತ್ತಿದೆ. ಗುಜರಾತಿನ ಹುಡುಗನೊಬ್ಬ ಅದೇ ರೀತಿಯ ಕ್ಷೌರ ಮಾಡಿಸಲು ಹೋಗಿ ತಲೆ ಸುಟ್ಟುಕೊಂಡ ಘಟನೆ ನಡೆದಿದೆ.

ಬುಧವಾರ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ಸಲೂನ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೇರ್‌ ಕಟ್‌ ಪ್ರಾರಂಭದಲ್ಲಿ ಏನೂ ಆಗದೆ ವ್ಯಕ್ತಿ ಆರಾಮಾಗಿ ಕೂತಿದ್ದ ಕ್ರಮೇಣ ತಲೆಯಿಂದ ಬೆಂಕಿ ಕುತ್ತಿಗೆಯನ್ನು ತಲುಪಿ ಸುಡಲಾರಂಭಿಸಿದಾಗ ಉರಿ ತಾಳಲಾಗದೇ ಆತ ಚೀರಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!