ಹೊಸದಿಗಂತ ವರದಿ, ಕಲಬುರಗಿ
ಹಳ್ಳದಲ್ಲಿ ಹರಿಯುತ್ತಿರುವ ಕುಲಷಿತ ನೀರನ್ನು ಸೇವಿಸಿ,10 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಬಣಮಗಿ ಗ್ರಾಮದಲ್ಲಿ ನಡೆದಿದೆ.
ಬಣಮಗಿ ಗ್ರಾಮದ ನಿವಾಸಿ ಚಂದ್ರಶ್ಯಾ ಖೇಡ ಅವರಿಗೆ ಸೇರಿದ 40 ಕುರಿಗಳಲ್ಲಿ 10 ಕುರಿಗಳು ನೀರು ಕುಡಿದು ಅಸುನೀಗಿವೆ. ಮಧ್ಯಾಹ್ನ ಹೊತ್ತಿನಲ್ಲಿ ಕುರಿ ಮೇಯಿಸಿಕೊಂಡು, ಹಳ್ಳಕ್ಕೆ ನೀರು ಕುಡಿಸಲು ಕುರಿಗಳನ್ನು ಕರೆದುಕೊಂಡು ಹೋಗಿದ್ದಾನೆ.ಕುಡಿದ ಅದ೯ಗಂಟೆಗಳಲ್ಲೆ,ಕುರಿಗಳು ಪ್ರಾಣ ಬಿಟ್ಟಿವೆ ಎಂದು ತಿಳಿದು ಬಂದಿದೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಕುರಿಗಳಿಗೆ ಪರಿಹಾರ ಒದಗಿಸುವ ಬಗ್ಗೆ ಭರವಸೆ ಅಧಿಕಾರಿಗಳು ನೀಡಿದ್ದಾರೆ.