SHOCKING | ಬೆಂಗಳೂರಿನ ಕದಂಬ ಹೊಟೇಲ್‌ಗೆ ಬಾಂಬ್‌ ಬೆದರಿಕೆ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ ಇದೀಗ ಬೆಂಗಳೂರಿನ ಕದಂಬ ಹೋಟೆಲ್‍ಗೆ  ಬಾಂಬ್ ಬೆದರಿಕೆ ಹಾಕಿರುವ ಪತ್ರವೊಂದು ದೊರೆತಿದೆ.

ಹೆಚ್ ಎಂ ಟಿ ಗ್ರೌಂಡ್ ಬಳಿ ಇರುವ ಕದಂಬ ಹೋಟೆಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಜಾಲಹಳ್ಳಿ ಪೊಲೀಸ್ ಸ್ಟೇಷನ್ ಗೆ ಅನಾಮಧೇಯ ಪತ್ರ ಬಂದಿದೆ. ಕೂಡಲೇ ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಂಬ್ ಸ್ಕ್ವಾಡ್, ಶ್ವಾನ ದಳಗಳಿಂದ ಪರಿಶೀಲನೆ ನಡೆಸಿದ್ದಾರೆ.

ಈ ಪತ್ರ ಪೋಸ್ಟ್ ಆಫೀಸ್ ಮೂಲಕ ಬಂದಿದ್ದು, ಅರ್ಧ ಗಂಟೆ ಮುಂಚಿತವಾಗಿ ಜಾಲಹಳ್ಳಿ ಪೊಲೀಸರು ಸ್ವೀಕರಿಸಿದ್ದರು. ಪತ್ರವು ಒಂದು ಪೇಜ್ ಇದ್ದು, ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಬಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!