VIDEO ‘ಶಾಲೆಯನ್ನು ಮತಗಟ್ಟೆಯಾಗಿ ಬಳಸಬೇಡಿ ಪ್ಲೀಸ್‌ʼ ಪುಟಾಣಿ ಬಾಲಕಿ ಆಲೋಚನೆ ಮೆಚ್ಚುವಂಥದ್ದೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಏಪ್ರಿಲ್ 19ರಂದು ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಶಾಲೆಯನ್ನು ಮತಗಟ್ಟೆಯಾಗಿ ಬಳಸಿ ಗಲೀಜು ಮಾಡಿ ಹೋಗಿದ್ದಕ್ಕೆ ಪುಟಾಣಿಯೊಂದು ಕಳವಳ ವ್ಯಕ್ತಪಡಿಸಿದೆ.

ತನ್ನ ಶಾಲೆಯ ಮೂಲಸೌಕರ್ಯಕ್ಕೆ ಉಂಟಾದ ಹಾನಿಯ ಬಗ್ಗೆ ಚೆನ್ನೈನ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಳವಳ ವ್ಯಕ್ತಪಡಿಸಿದ್ದಾಳೆ. ಶಾಲೆಯನ್ನು ಮತಗಟ್ಟೆಯಾಗಿ ಬಳಸಿಕೊಂಡಿದ್ದು, ಸ್ಮಾರ್ಟ್ ಬೋರ್ಡ್, ಪ್ರಯೋಗಾಲಯದ ಉಪಕರಣಗಳಂತಹ ಅಗತ್ಯ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ವಿದ್ಯಾರ್ಥಿನಿಯು ಆರೋಪಿಸಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಗೋಡೆಗಳನ್ನು ಪೋಸ್ಟರ್‌ಗಳಿಂದ ಹೇಗೆ ಹಾಳುಮಾಡಲಾಗಿದೆ ಮತ್ತು ಆಹಾರ ತ್ಯಾಜ್ಯವನ್ನು ಅಲ್ಲಲ್ಲಿ ಹೇಗೆ ಬಿಡಲಾಗಿದೆ ಎಂಬುದನ್ನು ವಿದ್ಯಾರ್ಥಿನಿ ವಿಡಿಯೋದಲ್ಲಿ ತೋರಿಸಿದ್ದಾಳೆ. ಏಪ್ರಿಲ್​​ 21ರಂದು ಹಂಚಿಕೊಂಡಿರುವ ವಿಡಿಯೋ ಈಗಾಗಲೇ 13 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!