BOMB | ದೆಹಲಿಯ ಚಾಚಾ ನೆಹರು ಆಸ್ಪತ್ರೆಗೆ ಬಾಂಬ್​ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೆಹಲಿಯ ಗೀತಾ ಕಾಲೊನಿಯಲ್ಲಿರುವ ಚಾಚಾ ನೆಹರು ಆಸ್ಪತ್ರೆಗೆ ಬಾಂಬ್‌ ಬೆದರಿಕೆ ಇಮೇಲ್ ಬಂದಿದ್ದು, ರೋಗಿಗಳು ಗಾಬರಿಯಾಗಿದ್ದಾರೆ.

ಪೊಲೀಸರು ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ, ಮಾಹಿತಿ ಮೇರೆಗೆ ಬಾಂಬ್ ನಿಷ್ಕ್ರಿಯ ದಳ ಚಾಚಾ ನೆಹರು ಆಸ್ಪತ್ರೆಗೆ ತಲುಪಿದೆ. ಆಸ್ಪತ್ರೆ ಆವರಣದಲ್ಲಿ ಬಾಂಬ್ ಬೆದರಿಕೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಮಾಹಿತಿ ಪ್ರಕಾರ ಬಾಂಬ್ ಬೆದರಿಕೆ ಇರುವ ಈ ಇಮೇಲ್ ಸಿಬ್ಬಂದಿಗೆ ಬಂದಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಬರೆಯಲಾಗಿದೆ.

ಇಡೀ ಆಸ್ಪತ್ರೆಯನ್ನೇ ಖಾಲಿ ಮಾಡಿಸಲಾಗಿದ್ದು, ರೋಗಿಗಳು, ಜೊತೆಯಲ್ಲಿ ಇರುವ ಜನರು ಎಲ್ಲರೂ ಭಯಭೀತರಾಗಿದ್ದಾರೆ. ಇಡೀ ಹಾಸ್ಪಿಟಲ್‌ ಜಾಲಾಡಿದ ನಂತರ ಯಾವುದೇ ಬಾಂಬ್‌ ಪತ್ತೆಯಾಗದ ಕಾರಣ ಇದೀಗ ರೋಗಿಗಳನ್ನು ಆಸ್ಪತ್ರೆಯ ಒಳಗೆ ಕಳುಹಿಸಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!