Friday, August 12, 2022

Latest Posts

ಪಾಟ್ನಾ ಕೋರ್ಟ್​ ಆವರಣದಲ್ಲಿ ಬಾಂಬ್​ ಸ್ಫೋಟ: ಪೊಲೀಸ್​ ಅಧಿಕಾರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪಾಟ್ನಾ ಸಿವಿಲ್​ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಕಚ್ಚಾ ಬಾಂಬ್​ ಸ್ಫೋಟಗೊಂಡಿದ್ದು, ಪೊಲೀಸ್​ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಪೊಲೀಸರನ್ನೇ ಗುರಿಯಾಗಿರಿಸಿ ಈ ಬಾಂಬ್ ಸ್ಫೋಟಿಸಲಾಗಿದ್ದು, ಸದ್ಯ ಸಬ್​ಇನ್ಸ್​​ಪೆಕ್ಟರ್​​​ ಕೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಿರ್ಬಾಹೊರ್​​ ಠಾಣೆಯ ಎಸ್​ಎಚ್​ಒ ಸಬೀಹುಲ್​ ಹಕ್​ ತಿಳಿಸಿದ್ದಾರೆ.
ಭೀಕರ ಶಬ್ದದಿಂದ ಮೊದಲಿಗೆ ಟೈರ್​ ಸ್ಫೋಟಗೊಂಡಿರಬಹುದು ಎಂದು ಭಾವಿಸಲಾಗಿತ್ತು, ನಂತರ ನೋಡಿದಾಗ ಕಚ್ಚಾ ಬಾಂಬ್ ಸ್ಫೋಟವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕವೇ ಮಾಹಿತಿ ದೊರೆಯಲಿದೆ ಎಂದು ಸಬೀಹುಲ್​ ಹಕ್​ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss