ಮೆಹ್ರುಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು: ಡಿಎನ್‌ಎ ವರದಿಯಲ್ಲಿ ದೃಢ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮೆಹ್ರೌಲಿ ಅರಣ್ಯದಿಂದ ಮೂಳೆಗಳ ರೂಪದಲ್ಲಿ ಪೊಲೀಸರಿಗೆ ದೊರೆತ ಶವದ ತುಂಡುಗಳು ಶ್ರದ್ಧಾ ಅವರ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿವೆ. ಇದು ಸಿಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ.

ಈಗಾಗಲೇ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಹಲವು ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ವೇಳೆ ಆತ ಹೇಳಿದಂತೆ ಮೆಹ್ರೌಲಿ ಅರಣ್ಯ ಮತ್ತು ಗುರುಗ್ರಾಮ್‌ನಲ್ಲಿ ಅವರು ಪೊಲೀಸರು ಮೃತದೇಹದ ಹಲವಾರು ತುಂಡುಗಳನ್ನು ಮೂಳೆಗಳ ರೂಪದಲ್ಲಿ ವಶಪಡಿಸಿಕೊಂಡರು. ಬಳಿಕ ಈ ಎಲ್ಲದರ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದರು. ಅಷ್ಟೇ ಅಲ್ಲ ಶ್ರದ್ಧಾ ವಾಕರ್‌ ತಂದೆಯ ಮಾದರಿಯನ್ನೂ ಡಿಎನ್ ಎ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.

ಪೊಲೀಸ್ ವಿಚಾರಣೆ ವೇಳೆ ಅಫ್ತಾಬ್ ತಾನು ಶ್ರದ್ಧಾಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದು, ಮೇ. 18 ರಂದು ಶ್ರದ್ಧಾಳ ಜೊತೆ ಜಗಳವಾಡಿ ಆಕೆಯನ್ನು ತಾನು ಕತ್ತು ಹಿಸುಕಿ ಕೊಲೆ ಮಾಡಿದ್ದೆ ಎಂದು ಅಫ್ತಾಬ್‌ ತಿಳಿಸಿದ್ದನು. ಆ ಬಳಿಕ ಅವಳ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಯಾರಿಗೂ ಅನುಮಾನ ಬರದೇ ಇರಲು ಫ್ರಿಜ್‌ನಲ್ಲಿಟ್ಟಿದ್ದೆ ಎಂದು ಹೇಳಿದ್ದ. ಪ್ರತಿ ದಿನ ರಾತ್ರಿ ಬ್ಯಾಗ್‌ನಲ್ಲಿ ಆಕೆಯ ದೇಹದ ಒಂದೊಂದು ತುಂಡುಗಳನ್ನು ತುಂಬಿಕೊಂಡು, ನಗರದ ವಿವಿಧ ಪ್ರದೇಶಗಳಲ್ಲಿ ಅಫ್ತಾಬ್‌ ಎಸೆದು ಬರುತ್ತಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!