ಕುಲ್ದೀಪ್- ಸಿರಾಜ್ ಮಾರಕ ದಾಳಿ: ಪೆವಿಲಿಯನತ್ತ ಪರೇಡ್ ನಡೆಸಿದ ಬಾಂಗ್ಲಾ ಬ್ಯಾಟ್ಸ್ ಮ್ಯಾನ್ ಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಮಂಕಾದ ಬಾಂಗ್ಲಾದೇಶ ತಂಡ ಎರಡನೇ ದಿನದಾಟದಂತ್ಯದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್‌ ಬಾರಿಸಿದೆ.ಈ ಮೂಲಕ ಇನ್ನೂ 271 ರನ್‌ಗಳ ಹಿನ್ನೆಡೆಯಲ್ಲಿದೆ.

ಟೀಂ ಇಂಡಿಯಾವನ್ನು 404 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದ್ದು, ಮೊದಲ ಎಸೆತದಲ್ಲೇ ಸಿರಾಜ್‌ ನಜ್ಮುಲ್ ಹೊಸೈನ್ ಅವರನ್ನು ಪೆವಿಲಿಯನ್ನಿಗಟ್ಟಿದರೆ, ಯಾಸಿರ್ ಅಲಿಯನ್ನು ಕ್ಲೀನ್ ಬೌಲ್ಡ್‌ ಮಾಡುವ ಮೂಲಕ ಉಮೇಶ್ ಯಾದವ್‌ ಔಟ್ ಮಾಡಿದರು.

ಬಾಂಗ್ಲಾದೇಶ ತಂಡವು 56 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಬಳಿಕ ಬೌಲಿಂಗ್ ಇಳಿದ ಕುಲ್ದೀಪ್ ಯಾದವ್ ಕೂಡಾ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು.

ಸದ್ಯ ಬಾಂಗ್ಲಾದೇಶ ತಂಡವು ತಂಡವು 8 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದ್ದು, ಮೆಹದಿ ಹಸನ್ 16 ಹಾಗೂ ಎಬೊದತ್ ಹೊಸೈನ್ 13 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದೀಗ ಬಾಂಗ್ಲಾದೇಶ ತಂಡವು ಫಾಲೋ ಆನ್‌ನಿಂದ ಪಾರಾಗಬೇಕಿದ್ದರೇ 205 ರನ್‌ ಕಲೆಹಾಕಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!