ಪಿಎಸ್ಐ ನೇಮಕಾತಿ ಅಕ್ರಮ: ತರಬೇತಿ ಪಿಎಸ್ಐ ಸಿಐಡಿ ವಶಕ್ಕೆ

ಹೊಸದಿಗಂತ ವರದಿ, ಕಲಬುರಗಿ:

545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಪೊಲೀಸ್ ಪೇದೆಗಳು ಭಾಗಿಯಾಗಿರುವ ನಡುವೆ ಈಚೆಗೆ ನೇಮಕಾತಿಯಾಗಿ ತರಬೇತಿ ಪಡೆಯುತ್ತಿದ್ದ ಸಬ್ ಇನ್ಸ್‌ಪೆಕ್ಟರ್‌ರೊಬ್ಬರನ್ನು ಸಿಐಡಿ ವಶಪಡಿಸಿಕೊಂಡಿದೆ.

ಇಲ್ಲಿನ ನಾಗನಹಳ್ಳಿ ಪೊಲಿಸ್ ತರಬೇತಿ ಮಹಾವಿದ್ಯಾಲಯದಲ್ಲಿ ಕೆಸ್ಐಎಸ್ಎಫ್ ಸಬ್ ಇನ್ಸ್‌ಪೇಕ್ಟರ್ ತರಬೇತಿ ಪಡೆಯುತ್ತಿರುವ ಯಶವಂತಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಯಶವಂತಗೌಡ ಪಾಸಾಗಿ ಆಯ್ಕೆಯಾಗಿದ್ದ. ಕಳೆದ 22 ರಂದು ಬೆಂಗಳೂರಿನ ಸಿಐಡಿ ಕಚೇರಿಗೆ ದಾಖಲಾತಿ ಪರಿಶೀಲನೆಗೆ ತೆರಳಿದ್ದ. ದಾಖಲಾತಿ ಪರಿಶೀಲನೆ ಮುಗಿಸಿ ವಾಪಸ್ ತರಬೇತಿ ಕೇಂದ್ರಕ್ಕೆ ವಾಪಸ್ಸಾಗಿದ್ದ. ಸಿಐಡಿ ತಂಡ ಬೆಂಗಳೂರಿನಿಂದ ನಾಗನಹಳ್ಳಿ ಪಿಟಿಸಿ ತರಬೇತಿ ಕೇಂದ್ರಕ್ಕೆ ಆಗಮಿಸಿ ಈತನನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ತೆರಳಿದೆ.

6 ಜನ ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ.

ಪಿಎಸ್ಐ ನೇಮಕಾತಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶಿನಾಥ್ ಚಿಲ್,ಶ್ರೀಧರ್ ಪವಾರ್ ಹಾಗೂ ಮಂಜುನಾಥ್ ಮೇಳಕುಂದಿ ಗೆ 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ, ಹೆಚ್ಚಿನ ವಿಚಾರಣೆಗಾಗಿ ಅನುವು ಮಾಡಿಕೊಟ್ಟಿದೆ.

ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಗೆ ಸಿಐಡಿ ಮನವಿ ಮಾಡಿತ್ತು. ಸಿಐಡಿ ಮನವಿ ಪುರಸ್ಕರಿಸಿ ಕಸ್ಟಡಿಗೆ ನೀಡಿ ಕಲಬುರಗಿ ಮೂರನೇ ಜೆಎಮ್ಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇನ್ನೂ ಅದೇ ರೀತಿ ಪ್ರಭು, ಪ್ರಭು ತಂದೆ ಶರಣಪ್ಪ ಹಾಗೂ ಚಂದ್ರಕಾಂತ ಕುಲಕರ್ಣಿ ಗೆ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ಮಾಡಿದೆ.

ಇಂದು ಒಟ್ಟು ಆರು ಜನ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಆರು ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಸಿಐಡಿ ಹಾಜರು ಪಡಿಸಿತ್ತು.ಹೆಚ್ಚಿನ ವಿಚಾರಣೆಯ ಮನವಿ ಪುರಸ್ಕರಿಸಿ ನ್ಯಾಯಾಲಯ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!