Friday, June 2, 2023

Latest Posts

ಭಾರತ-ಬಾಂಗ್ಲಾ ಗಡಿಯಲ್ಲಿ ಹಾವಿನ ವಿಷ ವಶಕ್ಕೆ: ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

BSF ಪಡೆಗಳು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಒಂದು ಸಣ್ಣ ಅನುಮಾನ ಬಂದರೂ ಭದ್ರತಾ ಪಡೆಗಳು ಜಾಗೃತಗೊಳ್ಳುತ್ತವೆ. ಇಂತಹ ಗಡಿಯಲ್ಲಿ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಸೇನೆ ಎಚ್ಚೆತ್ತುಕೊಂಡಿತ್ತು. ಮಧ್ಯರಾತ್ರಿ ಇಬ್ಬರು ವ್ಯಕ್ತಿಗಳು ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಬಿಎಸ್ಎಫ್ ಪಡೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಸ್ಥಳದಿಂದ ಇಬ್ಬರೂ ಕಾಲ್ಕಿತ್ತಿದ್ದು, ಈ ಕ್ರಮದಲ್ಲಿ ಅವರು ಬೀಳಿಸಿದ ಜಾರ್ ತರಹದ ಬಾಟಲಿಯನ್ನು ವಶಪಡಿಸಿಕೊಂಡರು.

ಬಾಟಲಿ ತೆರೆದು ನೋಡಿದಾಗ ಅದರೊಳಗೆ ಹಾವಿನ ವಿಷ ಇದೆ ಎಂಬುದು ಬೆಳಕಿಗೆ ಬಂದಿದೆ. ಅದರ ಬೆಲೆ ಬರೋಬ್ಬರಿ 13 ಕೋಟಿ ರೂಪಾಯಿ ಎಂದು ಬಿಎಸ್ಎಫ್ ಪಡೆ ಬಹಿರಂಗಪಡಿಸಿವೆ. ಬಾಂಗ್ಲಾದೇಶದ ಗಡಿಯಲ್ಲಿ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎಚ್ಚೆತ್ತಿದ್ದವು. ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋಷ್‌ಪುರ ಬಿಒಪಿ ಪ್ರದೇಶದಲ್ಲಿ ಬಾಟಲಿಯನ್ನು ತೆರೆದಾಗ ವಿಷಯ ಬೆಳಕಿಗೆ ಬಂದಿದೆ.

ಈ ಬಾಟಲಿಯಲ್ಲಿ ರೆಡ್ ಡ್ರ್ಯಾಗನ್ ಕಂಪನಿ ಮೇಡ್ ಇನ್ ಫ್ರಾನ್ಸ್ ಎಂದು ಬರೆಯಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬಾಟಲ್ ನಲ್ಲಿರುವ ಹಾವಿನ ವಿಷ ನಾಗರ ಹಾವಿನದ್ದು. ಬಿಎಸ್ಎಫ್ 137ನೇ ಬೆಟಾಲಿಯನ್ ವಶಪಡಿಸಿಕೊಂಡ ಹಾವಿನ ವಿಷವನ್ನು ಬಲುಘಾಟ್ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ರೇಂಜರ್ ಸುಕಾಂತ್ ಓಜಾನ್ ಬಹಿರಂಗಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!