ಗಡಿ ಹಿಂಸಾಚಾರ: ಮೇಘಾಲಯದಲ್ಲಿ ಇಂಟರ್ ನೆಟ್ ನಿಷೇಧ ಮುಂದುವರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸ್ಸಾಂ-ಮೇಘಾಲಯ ಗಡಿ ಹಿಂಸಾಚಾರ ನಡೆದ ದಿನದಿಂದ ಮೇಘಾಲಯ ಸರ್ಕಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಡೇಟಾ ಸೇವೆಗಳನ್ನು ಅಮಾನತುಗೊಳಿಸಿತ್ತು. ಇದೀಗ ಇನ್ನೂ 48 ಗಂಟೆಗಳ ಕಾಲ ವಿಸ್ತರಿಸಿದೆ.

ಅಧಿಸೂಚನೆಯಲ್ಲಿ, ರಾಜ್ಯದ ಗೃಹ ಕಾರ್ಯದರ್ಶಿ ಸಿವಿಡಿ ಡೀಂಗ್ಡೋಹ್ ಅವರು, ಶಿಲ್ಲಾಂಗ್ನ ವಿವಿಧ ಭಾಗಗಳಲ್ಲಿ ಮತ್ತು ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಗಳಲ್ಲಿ ಅಸ್ಸಾಂ-ನೋಂದಾಯಿತ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಬಗ್ಗೆ ವರದಿ ಬಂದಿವೆ ಎಂದು ಹೇಳಿದ್ದಾರೆ.

ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಪಶ್ಚಿಮ ಜೈನ್ತಿಯಾ ಹಿಲ್ಸ್ನಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಡೇಟಾ ಸೇವೆಗಳ ನಿಷೇಧವನ್ನು 48 ಗಂಟೆಗಳವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆ ಮತ್ತು ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೇಘಾಲಯ ಗ್ರಾಮಸ್ಥರು ಮತ್ತು ಅಸ್ಸಾಂನ ಅರಣ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!