ಕರ್ನಾಟಕ ಚುನಾವಣೆಯಲ್ಲಿ ಟಾಲಿವುಡ್‌ ಸ್ಟಾರ್‌ ಹಾಸ್ಯ ನಟನಿಂದ ಅಬ್ಬರದ ಪ್ರಚಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದಲ್ಲಿ ರಸವತ್ತಾದ ರಾಜಕಾರಣ ನಡೆಯುತ್ತಿದೆ. ಮೇ 10 ರಂದು ಕರ್ನಾಟಕ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಎಲ್ಲಾ ಪಕ್ಷಗಳು ಪ್ರಚಾರದ ವೇಗವನ್ನು ಹೆಚ್ಚಿಸಿವೆ. ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಿನಿಮಾದ ಗ್ಲಾಮರ್ ಕೂಡ ಹೆಚ್ಚು ಜನರನ್ನು ತಲುಪುವ ಹಿನ್ನೆಲೆಯಲ್ಲಿ ನಟ/ನಟಿಯರನ್ನು ಪ್ರಚಾರಕ್ಕೆ ಕರೆದೊಯ್ಯಲಾಗುತ್ತಿದೆ. ಕನ್ನಡದ ಹಲವು ನಟರು ಈಗಾಗಲೇ ಕರ್ನಾಟಕ ಅಭಿಯಾನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ತೆಲುಗು ನಟರೂ ಕೂಡ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

ತೆಲುಗು ಸ್ಟಾರ್ ಕಮಿಡಿಯನ್ ಚಕ್ರವರ್ತಿ ಬ್ರಹ್ಮಾನಂದಂ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಪರವಾಗಿ ಬ್ರಹ್ಮಾನಂದಂ ಪ್ರಚಾರ ನಡೆಸಿದರು. ಕರ್ನಾಟಕದ ಹಾಲಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿದ್ದು, ಆಪ್ರದೇಶದಲ್ಲಿ ಪ್ರಚಾರಕ್ಕೆಂದು ಬ್ರಹ್ಮಾನಂದಂ ಅವರನ್ನು ಕರೆತರಲಾಗಿದೆ. ಚಿಕ್ಕಬಳ್ಳಾಪುರ ತುಸು ತೆಲುಗು ಭಾಷೆ ಬಳಕೆ ಹೆಚ್ಚು ಜೊತೆಗೆ ತೆಲುಗು ಸಿನಿಮಾಗಳ ಮೇಲೆಯೂ ಆಸಕ್ತಿ ಹೆಚ್ಚು ಹಾಗಾಗಿ ಸುಧಾಕರ್ ಬ್ರಹ್ಮಾನಂದಂ ಅವರನ್ನು ಕರೆತಂದು ಪ್ರಚಾರ ಮಾಡುತ್ತಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಬ್ರಹ್ಮಾನಂದಂ ಹೇಳಿದ್ದು.. ಡಾ.ಸುಧಾಕರ್ ನನಗೆ ಬಹಳ ವರ್ಷಗಳಿಂದ ಗೊತ್ತು. ವೈದ್ಯರಾಗಿ, ಸಚಿವರಾಗಿ ಹಲವು ಸೇವೆಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದರು. ಬ್ರಹ್ಮಾನಂದಂ ಕರ್ನಾಟಕ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!