ಶರದ್ ಪವಾರ್ ರಾಜೀನಾಮೆ ತಿರಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ಅವರು ರಾಜೀನಾಮೆ ನೀಡಿದ್ದು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ರಚಿಸಿದ್ದ ಎನ್‌ಸಿಪಿ ಕಮಿಟಿ ಇಂದು ರಾಜೀನಾಮೆಯನ್ನು ತಿರಸ್ಕಾರ ಮಾಡಿದೆ.

ಹೊಸ ಅಧ್ಯಕ್ಷರ ಆಯ್ಕೆಗೆ 18 ಜನ ಇರುವ ಸಮಿತಿಯನ್ನು ಪ್ರಫುಲ್ ಪಟೇಲ್ ನಾಯಕತ್ವದಲ್ಲಿ ಶರದ್ ಪವಾರ್ ರಚಿಸಿದ್ದು, ಈ ಸಮಿತಿ ಶರದ್ ಪವಾರ್ ಅವರ ರಾಜೀನಾಮೆಯನ್ನು ತಿರಸ್ಕಾರ ಮಾಡಿದೆ.

ಶರದ್ ಪವಾರ್ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು, ಪಕ್ಷಕ್ಕೆ ಹೊಸಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬಹುದು ಇಂದು ಪವಾರ್ ಅವರನ್ನು ಭೇಟಿ ಮಾಡಿ ಮಾತನಾಡಲಿದ್ದೇವೆ ಎಂದು ತಂಡ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!