ಹೊಸದಿಗಂಗ ಡಿಜಿಟಲ್ ಡೆಸ್ಕ್:
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 10ರ ಏಳನೇ ವಾರದ ಮೊದಲ ದಿನ ಬಿಗ್‌ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಎಂಟ್ರಿಯಾಗಿದ್ದಾರೆ.
ವಾಹಿನಿಯು ಇಂದು ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಈ ಸ್ಪೆಷಲ್ ಎಂಟ್ರಿಯ ತುಣುಕುಗಳನ್ನು ಕಾಣಬಹುದು.
ಬೆಳ್ಳಂಬೆಳಗ್ಗೆ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದಿದ್ದು, ಸ್ಪರ್ಧಿಗಳು ಕುತೂಹಲದಿಂದ ನೋಡುತ್ತಿದ್ದಾರೆ. ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು ಆವರಿಸುತ್ತದೆ. ಮನೆಯ ತುಂಬಾ ಓಡಾಡುತ್ತ, ಕ್ಯಾಮೆರಾಗಳ ಜೊತೆ ಮಾತನಾಡುತ್ತಾ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಕಾಣಿಸಿಕೊಂಡಿದ್ದಾರೆ.
ಬ್ರಹ್ಮಾಂಡ ಗುರೂಜಿ ಆಗಮನದ ಏಪಿಸೋಡ್ ಇಂದು ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.