ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಕಾರು ಕಳ್ಳತನ?

ಹೊಸದಿಗಂತ ವರದಿ ಕೊಪ್ಪಳ:

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಅವರ ಇನ್ನೋವಾ ಕಾರು ಭಾನುವಾರ ತಡರಾತ್ರಿ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

ತಾಲೂಕಿನ ಹಲಗೇರಿ ಗ್ರಾಮದ ನಿವಾಸದ ಮುಂದೆ ನಿಲ್ಲಿಸಿದ್ದ ಕೆಎ 50 ಎಂಬಿ 0382 ಸಂಖ್ಯೆ ಕಾರು ಕಳ್ಳತನವಾಗಿದೆ. ಚಾಲಕ ಹಾಗೂ ವಾಹನದ ಕೀ ತಮ್ಮ ಬಳಿಯೇ ಇರುವುದಾಗಿ ಶಂಭುಲಿಂಗನಗೌಡ ಹೇಳುತ್ತಿದ್ದಾರೆ.

ರಾತ್ರೋ ರಾತ್ರಿ ಯಾರೋ ತಮ್ಮ ವಾಹನ ಕದ್ದಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಆದರೆ, ಪೊಲೀಸರು ವಾಹನ ಬೆಂಗಳೂರಿನ ಗಾಂಧಿನಗರದ ಸಂಘದ ಕಚೇರಿ ಬಳಿ ಇದೆ ಎಂದು ಹೇಳುತ್ತಿದ್ದಾರೆ.

ಸಂಘದ ಅಧ್ಯಕ್ಷರಾಗಿ ಕೊಪ್ಪಳದ ಶಂಭುಲಿಂಗನಗೌಡ ಕಳೆದ ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಇದಾದ ಬಳಿಕ ಮಂಡ್ಯದ ನಾಗೇಶ್ ಎಂಬುವರು ಅಧ್ಯಕ್ಷರೆಂದು ಹೇಳಲಾಯಿತು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!