ಟೀಕೆಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡ್ತಿದೆ ‘ಬ್ರಹ್ಮಾಸ್ತ್ರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

ಬಾಯ್‌ಕಾಟ್ ಭೀತಿ ಜತೆಗೇ ಸಿನಿಮಾ ತೆರೆಕಂಡಿದ್ದು, ಮೊದಲ ದಿನವೇ 40 ಕೋಟಿ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಮೊದಲ ಬಾರಿ ರಣ್‌ಬೀರ್ ಹಾಗೂ ಆಲಿಯಾ ಒಟ್ಟಿಗೇ ನಟಿಸಿದ್ದು, ಇವರಿಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ.

ಕನ್ನಡ, ತೆಲುಗು,ಮಲಯಾಳಂ ಹಾಗೂ ತಮಿಳಿನಲ್ಲಿಯೂ ಸಿನಿಮಾ ರಿಲೀಸ್ ಆಗಿದ್ದು, ರಾಜಮೌಳಿ ಅವರು ಸೌತ್‌ನಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಕಾರಣದಿಂದಲೂ ಸಿನಿಮಾ ಜನರನ್ನು ಮುಟ್ಟಿದ್ದು,ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿಯೇ 11 ಕೋಟಿ ರೂ. ಆದಾಯ ಗಳಿಸಿತ್ತು. ವೀಕೆಂಡ್‌ನಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆ ಚಿತ್ರತಂಡಕ್ಕಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!