ಉಗ್ರರ ವಿರುದ್ಧ ಹೋರಾಡಿದ್ದ ಭಾರತೀಯ ಸೇನೆಯ ಶ್ವಾನ ʻಜೂಮ್’ ಗೆ ಶೌರ್ಯ ಪ್ರಶಸ್ತಿ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನಾ ಶ್ವಾನ ‘ಜೂಮ್’ಗೆ ಮರಣೋತ್ತರವಾಗಿ ಡೆಸ್ಪ್ಯಾಚಸ್ ಪ್ರಶಸ್ತಿಯನ್ನು 28 ಸೇನಾ ಶ್ವಾನ ಘಟಕದಿಂದ ನೀಡಲಾಗಿದೆ.

ಜೂಮ್ ಕಳೆದ ವರ್ಷ ಅಕ್ಟೋಬರ್ 13 ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಆಪರೇಷನ್ ಟಾಂಗ್‌ಪಾವಾದಲ್ಲಿ ಎರಡು ಗುಂಡೇಟಿನಿಂದ ಗಾಯಗೊಂಡು ಸಾವನ್ನಪ್ಪಿತ್ತು.

ಅಕ್ಟೋಬರ್ 9 ರಂದು ಅನಂತನಾಗ್ ಜಿಲ್ಲೆಯ ಜೆ & ಕೆ ಯ ತಂಗ್ಪಾವಾ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಮೆಲೆಗೆ ಸೇನೆ ಶಂಕಿತ ಅಡಗಿದ್ದ ಮನೆ ಒಳಗೆ ಜೂಮ್ ಅನ್ನು ಪತ್ತೆಹಚ್ಚಲು ಕಳುಹಿಸಿದ್ದರು. ಈ ವೇಳೆ ಉಗ್ರರ ದಾಳಿ ವೇಳೆ ಜೂಮ್ ಗೆ ಎರಡು ಗುಂಡು ತಗುಲಿತ್ತು. ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!