ದಿನಭವಿಷ್ಯ| ಭಾವುಕ ವಿಷಯಗಳಲ್ಲಿ ನೀವು ನೋವುಣ್ಣುವ ಪ್ರಸಂಗ ಬರಬಹುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಪ್ರಯತ್ನಗಳು ಖಾಸಗಿ ಬದುಕಿನಲ್ಲಿ ವೃತ್ತಿಯಲ್ಲಿ ನಿಮ್ಮ ಹೆಸರು ಜನಪ್ರಿಯಗೊಳ್ಳಲು ನೆರವಾಗುತ್ತವೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ವೃಷಭ
ಹಣದ ವ್ಯವಹಾರಗಳಲ್ಲಿ ಇಂದು ಹೆಚ್ಚು ಎಚ್ಚರಿಕೆಯಿಂದ ವರ್ತಿಸಿ. ಕೆಲವು ವ್ಯವಹಾರಗಳು ನಿಮ್ಮ ಮನಸ್ಸಿಗೆ ಹೆಚ್ಚು ಒತ್ತಡ ತರುವುದು. ಸಹಕಾರ ಪಡೆಯಿರಿ.

ಮಿಥುನ
ಹೆಚ್ಚಿನ ವಿಶೇಷ ಇಲ್ಲದ ಸಾಮಾನ್ಯ ದಿನ. ಎಲ್ಲ ವ್ಯವಹಾರ ಸುಗಮ. ಹಣದ ಹರಿವು ಅಬಾಧಿತ. ಕೌಟುಂಬಿಕ ಆಗುಹೋಗುಗಳು ತೃಪ್ತಿಕರ.

ಕಟಕ
ಆತ್ಮವಿಶ್ವಾಸದ ದಿನ. ಹಾಗಾಗಿ ಇಂದು ದಿಟ್ಟ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಡ. ಖಾಸಗಿ ಸಂಬಂಧದಲ್ಲಿ ಗೊಂದಲ,ಅನುಮಾನ ಉಂಟಾದೀತು.

ಸಿಂಹ
ಹೆಚ್ಚು ಸಂತೋಷ, ಹೆಚ್ಚು ಉತ್ಸಾಹ. ಕಾರ್ಯಸಿದ್ಧಿ. ಇದು ಇಂದಿನ ನಿಮ್ಮ ದಿನಚರಿ. ಆದರೆ ಭಾವುಕ ವಿಷಯಗಳಲ್ಲಿ ನೀವು ನೋವುಣ್ಣುವ ಪ್ರಸಂಗ ಬರಬಹುದು.

ಕನ್ಯಾ
ನಿಮ್ಮ ಕೆಲಸವನ್ನು ಮಾಡುತ್ತಾ ಹೋಗಿ. ಇತರರು ಏನು ಮಾಡುತ್ತಾರೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದಿರಿ. ಬಂಧುಗಳ ನೆರವು.

ತುಲಾ
ಅತಿಯಾದ ಕೆಲಸದ ಒತ್ತಡ. ನೀವು ತಾಳ್ಮೆಯಿಂದ ವ್ಯವಹರಿಸಿದ್ದಾದರೆ ಎಲ್ಲವನ್ನು ಸರಿಯಾಗಿ ನಿಭಾಯಿಸುವಿರಿ. ವಾಗ್ವಾದಕ್ಕೆ ಹೋಗದಿರಿ.

ವೃಶ್ಚಿಕ
ಆಪ್ತರ ಜತೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುವರು. ಅದಕ್ಕೆ ಅವಕಾಶ ಕೊಡದಿರಿ. ಸಂಬಂಧದಲ್ಲಿ ನಂಬಿಕೆ ಮುಖ್ಯ ಎಂಬುದನ್ನು ಅರಿಯಿರಿ.

ಧನು
ನಿಮ್ಮದೇ ವರ್ತನೆ, ಕಾರ್ಯವನ್ನು ಪರಾಮರ್ಶೆಗೆ ಒಳಪಡಿಸಿ. ಆಗ ನಿಮ್ಮ ತಪ್ಪು ಅರಿಯುವುದು. ಅದನ್ನು ತಿದ್ದಿಕೊಂಡರೆ ಮನಶ್ಯಾಂತಿ ಲಭ್ಯ.

ಮಕರ
ದಿನವಿಡೀ ಅಸ್ಥಿರ ಭಾವನೆ ಕಾಡುವುದು. ಕುಟುಂಬದಲ್ಲಿ ಕೆಲವು ಬೆಳವಣಿಗೆ ನಿಮ್ಮ ಮನಸ್ಸಿನ ನೆಮ್ಮದಿ ಕಲಕುವುದು. ಸಂಯಮ ಅತ್ಯವಶ್ಯ.

ಕುಂಭ
ಸವಾಲಿನ ದಿನ. ಖಾಸಗಿ ಬದುಕಲ್ಲಿ ಮತ್ತು ವೃತ್ತಿಯಲ್ಲಿ ಏರುಪೇರು  ಎದುರಿಸುವಿರಿ. ಭಾವನಾತ್ಮಕ ಸಂಘರ್ಷ. ಸಮಚಿತ್ತದಿಂದ ವ್ಯವಹರಿಸಿ.

ಮೀನ
ವೃತ್ತಿಯಲ್ಲಿ ಸವಾಲು ಎದುರಿಸುವಿರಿ. ಇದೇವೇಳೆ, ಪ್ರೀತಿಯ ವಿಚಾರದಲ್ಲೂ ಅನಪೇಕ್ಷಿತ ಬೆಳವಣಿಗೆ. ಸಂಭಾಳಿಸಿಕೊಂಡು ಮುಂದುವರಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!