August 12, 2026
Wednesday, August 12, 2026
spot_img

ವಿದೇಶಿ ದೇಣಿಗೆ ನಿಯಮಕ್ಕೆ ಬ್ರೇಕ್? ಎಫ್‌ಸಿಆರ್‌ಎ ಮಸೂದೆ ಈಗ JPC ಅಂಗಳಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದ FCRA ತಿದ್ದುಪಡಿ ಮಸೂದೆ 2026 ಇದೀಗ ಜಂಟಿ ಸಂಸದೀಯ ಸಮಿತಿಯ (JPC) ಪರಿಶೀಲನೆಗೆ ಕಳುಹಿಸಲಾಗಿದೆ. ಮಸೂದೆಯ ಹಲವು ಅಂಶಗಳ ಬಗ್ಗೆ ಪ್ರತಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

JPC ಪರಿಶೀಲನೆಗೆ ಮಸೂದೆ

ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026’ (FCRA) ಅನ್ನು ಸಂಸತ್ತಿನಲ್ಲಿ ನೇರವಾಗಿ ಅಂಗೀಕರಿಸುವ ಬದಲು ಹೆಚ್ಚಿನ ಪರಿಶೀಲನೆಗಾಗಿ JPCಗೆ ಕಳುಹಿಸಲಾಗಿದೆ. ವಿದೇಶದಿಂದ ಹಣ ಪಡೆಯುವ ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಬಲಪಡಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ.

ಏನಿದೆ ಹೊಸ ಎಫ್‌ಸಿಆರ್‌ಎ ಮಸೂದೆಯಲ್ಲಿ?

ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದಾದರೆ, ಸಂಸ್ಥೆಯ ನಿರ್ವಹಣೆ ಹಾಗೂ ವಿದೇಶಿ ದೇಣಿಗೆಯಿಂದ ಸೃಷ್ಟಿಸಿರುವ ಆಸ್ತಿಗಳ ಮೇಲಿನ ನಿಯಂತ್ರಣವನ್ನು ‘Designated Authority’ ಎಂಬ ವ್ಯವಸ್ಥೆಗೆ ನೀಡುವ ಪ್ರಸ್ತಾವನೆ ಮಸೂದೆಯಲ್ಲಿದೆ. ಧಾರ್ಮಿಕ ಸ್ಥಳಕ್ಕೆ ಸಂಬಂಧಿಸಿದ ಆಸ್ತಿಯಾಗಿದ್ದರೆ, ಅದರ ಧಾರ್ಮಿಕ ಸ್ವರೂಪವನ್ನು ಕಾಪಾಡುವಂತೆ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂಬ ಅಂಶವೂ ಇದೆ.

ಇದನ್ನೂ ಓದಿ:

ಇದೇ ವೇಳೆ ಎಫ್‌ಸಿಆರ್‌ಎ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ಗರಿಷ್ಠ ಜೈಲು ಶಿಕ್ಷೆಯನ್ನು ಐದು ವರ್ಷದಿಂದ ಒಂದು ವರ್ಷಕ್ಕೆ ಇಳಿಸುವ ಪ್ರಸ್ತಾವನೆಯೂ ಮಸೂದೆಯಲ್ಲಿದೆ.

ಕ್ರೈಸ್ತ ಸಂಘಟನೆಗಳಿಂದ ವಿರೋಧ

ಮಸೂದೆಯ ಕೆಲವು ಅಂಶಗಳ ಬಗ್ಗೆ ಕ್ರೈಸ್ತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಸಂಸ್ಥೆಗಳು ಮತ್ತು ಎನ್‌ಜಿಒಗಳ ಮೇಲೆ ಇದು ಅನಗತ್ಯ ಒತ್ತಡ ಉಂಟುಮಾಡಬಹುದು ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಎಫ್‌ಸಿಆರ್‌ಎ ಅಂಕಿ-ಅಂಶಗಳೇನು?

ಎಫ್‌ಸಿಆರ್‌ಎ ಪೋರ್ಟಲ್‌ನ ಜುಲೈ 15, 2026ರ ಮಾಹಿತಿಯಂತೆ ದೇಶದಲ್ಲಿ 14,449 ಸಕ್ರಿಯ ಎಫ್‌ಸಿಆರ್‌ಎ ಪ್ರಮಾಣಪತ್ರಗಳು ಇವೆ. 22,498 ನೋಂದಣಿಗಳು ರದ್ದಾಗಿದ್ದು, 15,212 ಪ್ರಮಾಣಪತ್ರಗಳನ್ನು ಅವಧಿ ಮುಗಿದಿವೆ ಎಂದು ಗುರುತಿಸಲಾಗಿದೆ.

JPC ಪರಿಶೀಲನೆಯ ಬಳಿಕ ಮಸೂದೆಯ ಮುಂದಿನ ರೂಪುರೇಷೆ ಹಾಗೂ ಸಂಸತ್ತಿನಲ್ಲಿ ಅದರ ಅಂಗೀಕಾರದ ಕುರಿತು ಸ್ಪಷ್ಟತೆ ದೊರೆಯುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !