May 20, 2026
Wednesday, May 20, 2026
spot_img

Breakfast Mistake | ಮಕ್ಕಳಿಗೆ ಬೆಳಿಗ್ಗೆ ಟೀ-ಬಿಸ್ಕೆಟ್ ಕೊಡೋ ಅಭ್ಯಾಸ ಇದ್ಯಾ? ಇದು ಎಷ್ಟು ಹಾಳು ಗೊತ್ತಾ?

ಬೆಳಗಿನ ಉಪಹಾರ ದಿನದ ಅತ್ಯಂತ ಮುಖ್ಯ ಆಹಾರ. ಆದರೆ ಬ್ಯುಸಿ ಜೀವನಶೈಲಿಯಲ್ಲಿ ಅನೇಕ ಮನೆಗಳಲ್ಲಿ ಮಕ್ಕಳಿಗೆ ಬೇಗನೆ ಹೊಟ್ಟೆ ತುಂಬಲಿ ಎನ್ನುವ ಕಾರಣಕ್ಕೆ ಟೀ ಜೊತೆ ಬಿಸ್ಕೆಟ್ ಕೊಡುವ ಅಭ್ಯಾಸ ಹೆಚ್ಚಾಗಿದೆ. ಇದು ಸುಲಭ ಆಯ್ಕೆ ಅನಿಸಿದರೂ, ಮಕ್ಕಳ ಆರೋಗ್ಯದ ಮೇಲೆ ನಿಧಾನವಾಗಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಟೀದಲ್ಲಿರುವ ಕ್ಯಾಫಿನ್ ಮಕ್ಕಳ ದೇಹಕ್ಕೆ ಸೂಕ್ತವಲ್ಲ. ಇದು ಹಸಿವು ಕಡಿಮೆ ಮಾಡುವುದರ ಜೊತೆಗೆ ನಿದ್ರೆ ಚಕ್ರದ ಮೇಲೂ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಬಿಸ್ಕೆಟ್‌ಗಳಲ್ಲಿ ಸಕ್ಕರೆ, ಮೈದಾ ಮತ್ತು ಪ್ರೊಸೆಸ್ಡ್ ಫ್ಯಾಟ್ ಹೆಚ್ಚು ಇರುವುದರಿಂದ ಹೊಟ್ಟೆ ತುಂಬಿದ ಭಾವನೆ ಕೊಟ್ಟರೂ ಅಗತ್ಯ ಪೌಷ್ಟಿಕಾಂಶ ಸಿಗುವುದಿಲ್ಲ.

ಇದನ್ನೂ ಓದಿ:

ಇಂತಹ ಉಪಹಾರದಿಂದ ಮಕ್ಕಳಲ್ಲಿ ದೌರ್ಬಲ್ಯ, ಏಕಾಗ್ರತೆ ಕೊರತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಇಡ್ಲಿ, ದೋಸೆ, ಹಾಲು, ಹಣ್ಣು, ಮೊಟ್ಟೆ ಅಥವಾ ರಾಗಿ ಆಹಾರಗಳಂತಹ ಪೌಷ್ಟಿಕ ಆಯ್ಕೆಗಳು ಮಕ್ಕಳ ಬೆಳವಣಿಗೆಗೆ ಉತ್ತಮ.

ಸಣ್ಣ ಅಭ್ಯಾಸಗಳೇ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಬೆಳಗಿನ ಉಪಹಾರದಲ್ಲಿ ಟೀ-ಬಿಸ್ಕೆಟ್‌ಗೆ ಬದಲಾಗಿ ಪೌಷ್ಟಿಕ ಆಹಾರ ನೀಡುವುದು ಮಕ್ಕಳ ಭವಿಷ್ಯಕ್ಕೆ ಉತ್ತಮ ಹೂಡಿಕೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !