Saturday, April 1, 2023

Latest Posts

BREAKING NEWS | ಭಾರತದ ಮೇಲೆ ಚೀನಾ ಸ್ಪೈ ಬಲೂನ್‌ ಕಣ್ಣು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಬೇಹುಗಾರಿಕಾ ಬಲೂನ್‌ನ್ನು (Chinese Spy Balloons) ಅಮೆರಿಕ (America) ಹೊಡೆದುರುಳಿಸಿದ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಸುದ್ದಿ ಬಹಿರಂಗವಾಗಿದ್ದು, ಭಾರತ (India), ಜಪಾನ್ (Japan) ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಸ್ಪೈ ಬಲೂನ್‌ಗಳ ಬೇಹುಗಾರಿಕೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಯಾಗಿದೆ.

ಇದೀಗ ಚೀನಾದ ದಕ್ಷಿಣ ಕರಾವಳಿಯ ಹೈನಾನ್‌ ಪ್ರಾಂತ್ಯದಿಂದ ಹಲವಾರು ವರ್ಷಗಳಿಂದ ಬೇಹುಗಾರಿಕಾ ಬಲೂನ್‌ ಕಾರ್ಯನಿರ್ವಹಿಸುತ್ತಿದೆ. ಜಪಾನ್‌, ಭಾರತ, ವಿಯೆಟ್ನಾಂ, ತೈವಾನ್‌, ಫಿಲಿಪಿನ್ಸ್‌ ಸೇರಿದಂತೆ ಅನೇಕ ರಾಷ್ಟ್ರಗಳ ಮಿಲಿಟರಿ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಅಟ್ಲಾಂಟಿಕ್‌ ಸಾಗರದ ಮೇಲಿನ ವಾಯುಪ್ರದೇಶದಲ್ಲಿ ಮಿಸೈಲ್‌ ಬಳಸಿ ಚೀನಾದ ಬೇಹುಗಾರಿಕಾ ಬಲೂನ್‌ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ಈ ಬಗ್ಗೆ ಭಾರತ ಸೇರಿ ಮಿತ್ರರಾಷ್ಟ್ರಗಳಿಗೆ ಅಮೆರಿಕ ವಿವರಿಸಿತ್ತು.

ವಾಷಿಂಗ್ಟನ್‌ ಪೋಸ್ಟ್‌ನ ವರದಿ ಪ್ರಕಾರ, ಹಲವಾರು ಅನಾಮಧೇಯ ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳ ಸಂದರ್ಶನಗಳನ್ನು ಆಧರಿಸಿದೆ. ಬೇಹುಗಾರಿಕಾ ಬಲೂನ್‌ ಅನ್ನು ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ವಾಯುಪಡೆ ನಿರ್ವಹಿಸುತ್ತಿದೆ. ಐದು ಖಂಡಗಳಲ್ಲಿ ಇವನ್ನು ಗುರುತಿಸಲಾಗಿದೆ ಎಂದು ತಿಳಿಸಿದೆ.

ಈ ಬಲೂನ್‌ಗಳು PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಭಾಗವಾಗಿದ್ದು, ಬೇಹುಗಾರಿಕಾ ಕಾರ್ಯಾಚರಣೆ ನಡೆಸಲು ಅಭಿವೃದ್ಧಿಪಡಿಸಲಾಗಿದೆ. ಇದು ಇತರ ದೇಶಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!