ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕೆಯ ಸೊಸೆ ಸೇರಿದಂತೆ ಆಕೆಗೆ ಸಹಾಯ ಮಾಡುತ್ತಿದ್ದ ಇಬ್ಬರನ್ನು ಪ್ರಯಾಗ್‌ರಾಜ್ ರೈಲ್ವೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅವರಿಂದ ಹಣ, ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರೇ ಇದೇನಿದು ಅಂತಿದೀರಾ ಹೌದು.. ಹೊಸದಾಗಿ ಮದುವೆಯಾದ ತುವತಿಯೊಬ್ಬಳು ತನ್ನ ಪತಿ ಮತ್ತು ಅತ್ತೆ-ಮಾವನಿಗೆ ಡ್ರಗ್ಸ್ ಕೊಟ್ಟು ಹಣ-ಒಡವೆಯೊಂದಿಗೆ ಪರಾರಿಯಾದವರು ಸಿಕ್ಕಿಬಿದ್ದ ಸ್ಟೋರಿಯಿದು. ಮದುವೆ ಬಳಿಕ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ಶಾಕ್ ಕಾದಿತ್ತು.
ಪೊಲೀಸರ ಪ್ರಕಾರ ವಧುವಿನ ಹೆಸರು ಗುಡಿಯಾ. ಇತ್ತೀಚೆಗಷ್ಟೇ ಚಂದೌಲಿ ಜಿಲ್ಲೆಯ ಬಲುವಾದಲ್ಲಿ ಅಂಕಿತ್ ಅವರ ಕೈ ಹಿಡಿದಿದ್ದಾರೆ. ಮದುವೆಯ ದಿನ, ನವವಿವಾಹಿತರು ಸೇರಿದಂತೆ ವರನ ಕುಟುಂಬ ಸದಸ್ಯರು, ವಧುವಿನ ಸೋದರಸಂಬಂಧಿ ನಗೀನಾ ಜೊತೆಗೆ ವಾರಣಾಸಿಗೆ ಭೇಟಿ ನೀಡಲು ಹೊರಟಿದ್ದಾರೆ. ರೈಲು ಕಾನ್ಪುರವನ್ನು ಸಮೀಪಿಸುತ್ತಿದ್ದಾಗ, ಗುಡಿಯ ಸ್ನೇಹಿತರಾದ ಚೋರು ಮತ್ತು ಖಟ್ಕಾನಾ ಅವರ ಪ್ರಯಾಣದಲ್ಲಿ ಸೇರಿಕೊಂಡರು. ಅಲ್ಲಿ ಹಸಿವಿನಿಂದಾಗಿ ಕೆಲ ಹಣ್ಣುಗಳನ್ನು ಸೇವಿಸಿದ್ದಾರೆ ಅಷ್ಟೇ ಕತೆ ಮೈಮೇಲೆ ಎಚ್ಚರವಿಲ್ಲದಂತೆ ಎಲ್ಲರೂ ಗೊರಕೆ ಹೊಡೆದಿದ್ದಾರೆ.
ಕಾರಣ ಅವರು ತಿಂದ ಹಣ್ಣಿನಲ್ಲಿ ಮಾದಕ ವಸ್ತುವನ್ನು ಇಂಜೆಕ್ಟ್ ಮಾಡಲಾಗಿತ್ತು. ಸೊಸೆ ಸೇರಿದಂತೆ ಆಕೆಯ ಇಬ್ಬರು ಸ್ನೇಹಿತರು ಹಣ ಮತ್ತು ಆಭರಣಗಳನ್ನು ಪ್ಯಾಕ್ ಮಾಡಿ ಕಾನ್ಪುರ ರೈಲು ನಿಲ್ದಾಣದಿಂದ ಓಡಿಹೋಗಿದಾರೆ. ಅಷ್ಟೇ ಅಲ್ಲದೆ “ನಾನು ನಿನ್ನನ್ನು ಪ್ರೀತಿಸಲಿಲ್ಲ, ಮತ್ತೆ ನನ್ನನ್ನು ಹುಡುಕಬೇಡಿ” ಎಂದು ಗಂಡನ ನಂಬರ್‌ಗೆ ಮೆಸೇಜ್ ಮಾಡಿದ್ದಾಳೆ. ವರನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ಅಂತೂ ನಿನ್ನೆ ಪ್ರಯಾಗ್‌ರಾಜ್ ಪೊಲೀಸರು ಮೂವರನ್ನು ಬಂಧಿಸಿ ಹಣ-ಒಡವೆಯನ್ನು ವಶಪಡಿಸಿಕೊಂಡಿದ್ದಾರೆ.