ಅಯ್ಯಯ್ಯೋ! ಪ್ರಾರಂಭೋತ್ಸವದ ವೇಳೆಯೇ ಕುಸಿದು ಬಿದ್ದ ಸೇತುವೆ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (ಡಿಆರ್‌ಸಿ) ಸೇತುವೆ ಉದ್ಘಾಟನೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಸೇತುವೆ ಮೇಲಿದ್ದ ಅಧಿಕಾರಿಗಳು ತತ್ತರಿಸಿ ಹೋಗಿದ್ದಾರೆ. ಕುಸಿದ ಸೇತುವೆಯಿಂದ ಹೊರಬರಲು ಪಟ್ಟ ಕಷ್ಟ ಹೇಳೋಕೆ ಸಾಧ್ಯವಿಲ್ಲ. ಈ ವೇಳೆ ಸೇತುವೆ ಮೇಲಿದ್ದ ಮಹಿಳಾ ಅಧಿಕಾರಿಯನ್ನು ಭದ್ರತಾ ಸಿಬ್ಬಂದಿ ಕಾಪಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ, ಪ್ರವಾಹದಿಂದಾಗಿ ಸ್ಥಳೀಯ ಜನರು ನದಿ ದಾಟಲು ತೊಂದರೆಗಳನ್ನು ಎದುರಿಸುತ್ತಾರೆ.ಜನರ ಮನವಿ ಮೇರೆಗೆ ಅಧಿಕಾರಿಗಳು ಆ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಿದ್ದಾರೆ. ಈ ಸೇತುವೆ ಪೂರ್ಣಗೊಂಡ ನಂತರ ಉದ್ಘಾಟನೆ ಮಾಡಲು ಬಂದಿದ್ದರು ಅದರಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಇದ್ದಾರೆ. ಮಹಿಳಾ ಅಧಿಕಾರಿ ರಿಬ್ಬನ್ ಕತ್ತರಿಸುವ ವೇಳೆ ಸೇತುವೆ ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದ ಸೇತುವೆ ಮೇಲಿದ್ದವರೆಲ್ಲ ಕೆಳಗೆ ಬೀಳುವುದನ್ನು ತಪ್ಪಿಸಲು ಒಬ್ಬರನ್ನೊಬ್ಬರು ತಳ್ಳಿಕೊಂಡು ಹತ್ತಲು ಯತ್ನಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳೀಯರು ತಿಳಿಸಿದರು.

ಉದ್ಘಾಟನೆಯ ದಿನವೇ ಸೇತುವೆ ಕುಸಿದಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಗುತ್ತಾ ಮರು ಕಮೆಂಟ್ ಮಾಡುತ್ತಿದ್ದಾರೆ. ರಿಬ್ಬನ್ ಸೇತುವೆ ಎರಡನ್ನು ಒಟ್ಟಿಗೆ ಕತ್ತರಿಸಿದಂತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!