Asia Cup | ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಲು ಇನ್ನೂ ಇದೆ ಅವಕಾಶ! ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮಂಗಳವಾರ ದುಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ  ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದೆ. ಏಷ್ಯಾ ಕಪ್ 2022 ರ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಈಗ ಇತರ ತಂಡಗಳ ಮೇಲೆ ಅವಲಂಬಿತವಾಗಿದೆ.  ಟೀಮ್ ಇಂಡಿಯಾಗೆ ಇನ್ನು ಒಂದು ಪಂದ್ಯ ಮಾತ್ರ ಉಳಿದಿದ್ದು, ಅದರಲ್ಲಿ ಗೆದ್ದರೂ ಉಳಿದ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಏಷ್ಯಾ ಕಪ್ 2022 ರ ಫೈನಲ್‌ಗೆ ಭಾರತ ಹೇಗೆ ಅರ್ಹತೆ ಪಡೆಯಬಹುದು?
ಭಾರತ ಟೂರ್ನಿಯಲ್ಲಿ ಬಹುತೇಕ ಹೊರಬಿದ್ದಿದ್ದರೂ ಸಣ್ಣ ಅವಕಾಶವಂದು ಜೀವಂತವಾಗಿದೆ. ಟೀಂ ಇಂಡಿಯಾ ಪೈನಲ್‌ಗೆ ಏರಬೇಕಾದರೆ, ಇಂದು ನಡೆಯಲಿರುವ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನ್‌ ಗೆಲ್ಲಬೇಕು. ಶುಕ್ರವಾರ ನಡೆಯುವ ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಪಾಕ್‌ ತಂಡವನ್ನು ಭಾರೀ ಅಂತರದಿಂದ ಸೋಲಿಸಬೇಕು.
ಇದರ ಜೊತೆಗೆ ಭಾರತ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಭಾರಿ ಅಂತರದಿಂದ ಸೋಲಿಸಿ ತನ್ನ ನಿವ್ವಳ ರನ್ ರೇಟ್ (NRR) ಅನ್ನು ಸಾಧ್ಯವಾದಷ್ಟು ಹೆಚ್ಚಿಸಿಕೊಳ್ಳಬೇಕು.
2 ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ಮುಂದಿನ ಪಂದ್ಯದಲ್ಲಿ ಗೆದ್ದರೆ  ಒಟ್ಟು ಆರು ಅಂಕಗಳೊಂದಿಗೆ ಫೈನಲ್‌ ಪ್ರವೇಶಿಸಲಿದೆ. ಆಗ ಉಳಿದ ಉಳಿದ ಮೂರು ತಂಡಗಳು ತಲಾ 2 ಅಂಕಗಳನ್ನು ಗಳಿಸಿರುತ್ತವೆ. ಅಲ್ಲಿ ಅದೃಷ್ಟ ಭಾರತದ ಪರವಾಗಿದ್ದು, ತಮ್ಮ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ರನ್ ರೇಟ್ ಹೊಂದಿದ್ದರೆ ಭಾರತ ಏಷ್ಯಾ ಕಪ್ 2022 ರ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಇಂದಿನ ಪಂದ್ಯದಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಸೋಲಿಸಿದರೆ, ಏಷ್ಯಾಕಪ್‌ನ ಈ ಆವೃತ್ತಿಯಲ್ಲಿ ಭಾರತದ ಪ್ರಯಾಣವು ಕೊನೆಗೊಳ್ಳುತ್ತದೆ. ಜೊತೆಗೆ ಅಫ್ಘಾನ್‌ ಕೂಡಾ ಹೊರಬೀಳಲಿದ್ದು, ಪಾಕ್‌ ಮತ್ತು ಶ್ರೀಲಂಕಾ ಫೈನಲ್‌ ಪ್ರವೇಶಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!