ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಗುಳ್ಳ ಬದನೆ ಎರಡು
ಕಡ್ಲೆ ಹಿಟ್ಟು ಎರಡು ಕಪ್
ಮೆಣಸಿನ ಪುಡಿ ಒಂದು ಟೀ ಸ್ಪೂನ್
ಇಂಗು, ಜೀರಿಗೆ ಒಂದು ಟೀ ಸ್ಪೂನ್
ರುಚಿಗೆ ಬೇಕಾದಷ್ಟು ಉಪ್ಪು
ಓಮದ ಕಾಳು ಅರ್ಧ ಟೀ ಸ್ಪೂನ್
ನೀರು ಎರಡು ಲೋಟ
ಕರಿಯಲು ಎಣ್ಣೆ
ಮಾಡುವ ವಿಧಾನ:
ಗುಳ್ಳ ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಪ್ರತ್ಯೇಕ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಇಂಗು, ಜೀರಿಗೆ, ಮೆಣಸಿನ ಪುಡಿ, ಓಮದ ಕಾಳು ಹಾಕಿ ಕದಡಿಕೊಳ್ಳಿ. ನಂತರ ಕಡ್ಲೆ ಹಿಟ್ಟು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಬಿಸಿಗಿಟ್ಟುಕೊಳ್ಳಿ. ಕಲಸಿಟ್ಟುಕೊಂಡ ಕಡ್ಲೆ ಹಿಟ್ಟಿಗೆ ಗುಳ್ಳ ಸ್ಲೈಸ್ ಹಾಕಿ ಗರಿ ಗರಿಯಾಗಿ ಕರಿಯಿರಿ. ಗುಳ್ಳ ಪೋಡಿ ಮಸ್ತ್ ಮಜಾ…