ಮಹಿಳಾ ಕ್ರಿಕೆಟ್‌ ವಿಶ್ವಕಪ್:‌ ಆಸರೆಯಾದ ಪೂಜಾ-ಸ್ನೇಹ ಜೊತೆಯಾಟ, ಪಾಕಿಸ್ತಾನಕ್ಕೆ 245 ರನ್‌ ಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ನಲ್ಲಿ ಇಂದು ಇಂಡಿಯಾ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ 50 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 244 ರನ್‌ ಗಳಿಸಿದೆ.
ನ್ಯೂಜಿಲೆಂಡ್‌ ನ ಬೇ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು.
ಆರಂಭದಲ್ಲೇ ಭಾರೀ ಆಘಾತ ಕಂಡ ಟೀಂ ಇಂಡಿಯಾದ ಶಫಾಲಿ ವರ್ಮಾ ಖಾತೆ ತೆರೆಯದೆ ಔಟಾದರು. ಬಳಿಕ ಬಂದ ದೀಪ್ತಿ ಶರ್ಮಾ 92 ರನ್‌ ಗಳಿಸಿದರು. ಸ್ಮೃತಿ ಮಂದಾನ 52 ರನ್‌ ಗಳಿಸಿ ಔಟಾದರು.
ನಾಯಕಿ ಮಿಥಾಲಿ 9 ರನ್‌, ಉಪನಾಯಕಿ ಹರ್ಮನ್‌ ಕೌರ್‌ 5ಕ್ಕೆ ವಿಕೆಟ್‌ ಒಪ್ಪಿಸಿದರು, 114 ರನ್‌ ಪಡೆಯುವಷ್ಟರಲ್ಲಿ ಟೀಂ ಇಂಡಿಯಾ 6 ವಿಕೆಟ್‌ ಕಳೆದುಕೊಂಡಿತ್ತು.
ಬಳಿಕ ಬಂದ ಪೂಜಾ ವಸ್ತ್ರಾಕರ್‌ ಮತ್ತು ಸ್ನೇಹ್‌ ರಾಣಾ ತಂಡವನ್ನು ಮುನ್ನಡೆಸಿದರು. ಇಬ್ಬರು ಅರ್ಧ ಶತಕ ಬಾರಿಸುವ ಮೂಲಕ ಶತಕದ ಜೊತೆಯಾಟ ಆಡಿದರು. ಸ್ನೇಹ್‌ 4 ಬೌಂಡರಿಗಳೊಂದಿಗೆ 53 ರನ್‌ ಗಳಿಸಿದರೆ, ಪೂಜಾ 8 ಬೌಂಡರಿ ಸಹಿತ 67 ತನ್‌ ಗಳಿಸಿದರು.
ಈ ಮೂಲಕ ಪಾಕ್‌ ತಂಡಕ್ಕೆ 245 ರನ್‌ ಗಳ ಟಾರ್ಗೆಟ್‌ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!