ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅಭೂತಪೂರ್ವ ದಾಖಲೆ ಬರೆದಿದ್ದಾರೆ.
ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ 2 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ನಲ್ಲಿ ಅತಿಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಶ್ರೇಷ್ಠ ವೇಗದ ಬೌಲರ್ ರಿಚರ್ಡ್ ಹ್ಯಾಡ್ಲಿಅವರನ್ನು ಹಿಂದಿಕ್ಕಿದ್ದಾರೆ. ಧನಂಜಯ ಡಿಸಿಲ್ವಾ ಅವರನ್ನು ಎಲ್ ಬಿ ಬಲೆಗೆ ಬೀಳಿಸುವ ಮೂಲಕ ಅಶ್ವಿನ್ ಟೆಸ್ಟ್ ನಲ್ಲಿ 432ನೇ ಟೆಸ್ಟ್ ವಿಕೆಟ್ ಗಳಿಸಿ ಹ್ಯಾಡ್ಲಿ (431) ಅವರ ದಾಖಲೆಯನ್ನು ಮುರಿದಿದ್ದಾರೆ. ಹ್ಯಾಡ್ಲಿ 86 ಟೆಸ್ಟ್‌ಗಳಲ್ಲಿ 431 ವಿಕೆಟ್ ಪಡೆದಿದ್ದಾರೆ.
ಅಶ್ವಿನ್ 85 ಟೆಸ್ಟ್‌ಗಳಲ್ಲಿ ಈ ದಾಖಲೆ ಮುರಿದಿದ್ದಾರೆ. 1993 ರ ವರೆಗೆ ಅತಿಹೆಚ್ಚು ವಿಕೆಟ್ ಗಳಿಸಿದ ಸಾಧಕ ಎನಿಸಿಕೊಂಡಿದ್ದ ಹೆಡ್ಲಿ ಅವರ ಅವರ ದಾಖಲೆಯನ್ನು ಭಾರತದವರೇ ಆದ ಕಪಿಲ್ ದೇವ್ ಮುರಿದಿದ್ದರು. ಕಪಿಲ್ ತಮ್ಮ ವೃತ್ತಿಜೀವನದಲ್ಲಿ 434 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಕಪಿಲ್ ಅವರನ್ನು ಹಿಂದಿಕ್ಕಿ ಟೆಸ್ಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಏರಡನೇ ಬಾರತೀಯ ಎನ್ನಿಸಿಕೊಳ್ಳಲು ಅಶ್ವಿನ್‌ಗೆ ಕೇವಲ 3 ವಿಕೆಟ್‌ಗಳ ಅಗತ್ಯವಿದೆ. ಪ್ರಸ್ತುತ ಟೆಸ್ಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 11ನೇ ಸ್ಥಾನದಲ್ಲಿದ್ದು, ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲಿದ್ದಾರೆ. ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ 619 ವಿಕೆಟ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಟೆಸ್ಟ್ ನ ಮೂರನೇ ದಿನದಾಟ ಮುಂದುವರೆಸಿರುವ ಶ್ರೀಲಂಕಾ 7 ವಿಕೆಟ್‌ಗಳಿಗೆ 173 ರನ್ ಗಳಸಿ ಸಂಕಷ್ಟದಲ್ಲಿದೆ.