ಗೋವಾದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ, ಕಾಮುಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪತಿಯೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದ ಬ್ರಿಟಿಷ್ ಮಹಿಳೆಯೊಬ್ಬರು ಗೋವಾದಲ್ಲಿ ಅತ್ಯಾಚಾರಕ್ಕೀಡಾಗಿದ್ದಾರೆ. ಬ್ರಿಟನ್‌ನ ಜೋಡಿಯೊಂದು ಮೋಜು ಮಸ್ತಿ ಮಾಡಲು ಗೋವಾಕ್ಕೆ ಬಂದಿತ್ತು. ಇದೇ ತಿಂಗಳ 2ರಂದು ಗೋವಾದ ಅರಂಬೋಲ್ ಸ್ವೀಟ್ ವಾಟರ್ ಬೀಚ್ ನಲ್ಲಿ ಒಂಟಿಯಾಗಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳೆಯ ಮೇಲೆ ಜೋಯಲ್ ವಿನ್ಸೆಂಟ್ ಡಿಸೋಜಾ ಎಂಬಾತ ಅತ್ಯಾಚಾರ ಎಸಗಿದ್ದ. ಮುಲ್ತಾನಿ ಜೇಡಿ ಮಣ್ಣಿನಿಂದ ಮಸಾಜ್ ಮಾಡುವುದಾಗಿ ಹೇಳಿ ಕರೆದೊಯ್ದ ಜೋಯಲ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ನಡೆದ ಎರಡು ದಿನಗಳ ನಂತರ ಆಕೆ ಪತಿಗೆ ವಿಷಯ ತಿಳಿಸಿದ್ದಾಳೆ. ಮಹಿಳೆಯ ಪತಿ ತಕ್ಷಣವೇ ಬ್ರಿಟಿಷ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾನೆ.

ಘಟನೆಯ ಕುರಿತು ಬ್ರಿಟನ್‌ ರಾಯಭಾರ ಕಚೇರಿಯವರು ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಗೋವಾ ಪೊಲೀಸರು ಆರೋಪಿಯನ್ನು ಗುರುತಿಸಿ, ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!