ಪಾಗ್ಲಾ ನದಿಯಲ್ಲಿ ಬಾಂಗ್ಲಾದೇಶ ಕಡೆಗೆ ತೇಲಿಬಿಟ್ಟಿದ್ದ 317 ಮೊಬೈಲ್ ಫೋನ್‌ ವಶಕ್ಕೆ ಪಡೆದ ಬಿಎಸ್‌ಎಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಬಂಗಾಳದ ಗಡಿಭಾಗದ ಬಾರ್ಡರ್ ಔಟ್ ಪೋಸ್ಟ್ ಲೋಧಿಯಾದಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ (BSF)ಯ 70ನೇ ಬೆಟಾಲಿಯನ್ ಪಡೆಗಳು, ಪಾಗ್ಲಾ ನದಿಯಲ್ಲಿ ಬಾಂಗ್ಲಾದೇಶದ ಕಡೆಗೆ ತೇಲಿಹೋಗುತ್ತಿದ್ದ 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿವೆ.
“ಪಾಗ್ಲಾ ನದಿಯಲ್ಲಿ ಬಾಳೆಗಿಡದ ಕಾಂಡಗಳಿಗೆ ಕಟ್ಟಿದ ಕೆಲವು ಪ್ಲಾಸ್ಟಿಕ್ ಪಾತ್ರೆಗಳು ನದಿಯ ಉದ್ದಕ್ಕೂ ಬಾಂಗ್ಲಾದೇಶದ ಕಡೆಗೆ ತೇಲುತ್ತಿರುವುದನ್ನು ಬಾರ್ಡರ್ ಔಟ್ ಪೋಸ್ಟ್ ಲೋಧಿಯಾ ಪಡೆಗಳು ಗಮನಿಸಿದವು. ಜಾಗರೂಕರಾದ ಯೋಧರು ತಕ್ಷಣ ನದಿಯಿಂದ ಅವುಗಳನ್ನು ವಶಕ್ಕೆ ಪಡೆದಾಗ ವಿವಿಧ ಕಂಪನಿಗಳ 317 ಮೊಬೈಲ್ ಫೋನ್‌ಗಳು ಪತ್ತೆಯಾಗಿದೆ. ಇದರ ಬೆಲೆ 38,83,000 ರೂ. ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.
ವಶಪಡಿಸಿಕೊಂಡ ಮಾಲನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸ್ ಠಾಣೆ ಆಂಗ್ಲ ಬಜಾರ್ ಗೆ ಹಸ್ತಾಂತರಿಸಲಾಗಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಾಣಿಕೆಯನ್ನು ತಡೆಯಲು ಗಡಿ ಭದ್ರತಾ ಪಡೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು 70ನೇ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ ತಿಳಿಸಿದ್ದಾರೆ. ಇದರಿಂದಾಗಿ ಕಳ್ಳಸಾಗಣೆಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಅಕ್ರಮಸಾಗಣಿಕೆದಾರರು ಇಂತಹ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!