ಬುದ್ಧ ಪೂರ್ಣಿಮೆ ಆಚರಣೆ: ಪ್ರಧಾನಿ ಮೋದಿಗೆ ಬೌದ್ಧ ಸನ್ಯಾಸಿಗಳಿಂದ ಕೃತಜ್ಞತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡಿದ್ದಕ್ಕೆ ಹಾಗೂ ಬುದ್ಧ ಪೂರ್ಣಿಮಾ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಬೌದ್ಧ ಸನ್ಯಾಸಿಗಳು ಮತ್ತು ಮುಖ್ಯ ಪೀಠಾಧಿಪತಿಗಳು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಧರ್ಮ, ಸಂಸ್ಕೃತಿ, ಸಂಪ್ರದಾಯ ಮತ್ತು ನಾಗರಿಕತೆಯನ್ನು ಭಾರತ ವಾರಸತ್ವದಿಂದ ಪಡೆದಿದ್ದಾಗಿದೆ. ಈ ಸಂಬಂಧ ಮತ್ತು ಸಹೋದರತ್ವದ ಬಲ ಶಕ್ತಿಯಾಗಿ ಬೆಳೆಯಬೇಕು. ಬೌದ್ಧ ತಾತ್ವಿಕ ಪರಿಕಲ್ಪನೆಗಳು ಎಲ್ಲಾ ಸಮಯದಲ್ಲೂ ಇಡೀ ಜಗತ್ತಿಗೆ ಸರಿಯಾಗಿವೆ ಮತ್ತು ಅತ್ಯಂತ ಸೂಕ್ತವಾಗಿವೆ ಎಂದಿದ್ದಾರೆ. ಮತ್ತು ಮಹಾ ಸಂಘವು ಪ್ರಧಾನ ಮಂತ್ರಿಯಿಂದ ಅಪಾರವಾಗಿ ಪ್ರಭಾವಿತವಾಗಿದ್ದು, ಬೌದ್ಧ ಧರ್ಮದ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ ಮತ್ತು ಉತ್ಸಾಹ ಅಮೋಘವಾದದ್ದು ಎಂದು ಮುಖ್ಯ ಪೀಠಾಧಿಪತಿಗಳ ಸಂದೇಶವನ್ನು ಅಲ್ಲಿನ ಸತಿಪತ್ತಾನ ನಿಯತಕಾಲಿಕೆ ಉಲ್ಲೇಖಿಸಿದೆ.

ಮೇ 16 ರಂದು ಬುದ್ಧ ಪೂರ್ಣಿಮಾ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಕ್ಕಾಗಿ ಭಾರತ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ (ಐಬಿಸಿ)ಕ್ಕೆ ಮಹಾಸಂಘದ ಪರವಾಗಿ ಪೀಠಾಧಿಪತಿಗಳು ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!