ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ.31ರಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಏ.8ಕ್ಕೆ ಮುಕ್ತಾಯವಾಗಲಿದೆ.
ರಾಷ್ಟ್ರಪತಿಗಳು ಜ.31ರಂದು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನ ಪ್ರಾರಂಭಗೊಳ್ಳಲಿದೆ. ಫೆ.1ರಂದು ಸರ್ಕಾರ 2022-2023ರ ಬಜೆಟ್ ಮಂಡಿಸಲಿದೆ.
ಅಧಿವೇಶನದ ಮೊದಲಾರ್ಧ ಜ.31ರಿಂದ ಫೆ. 11ರವರೆಗೆ ನಡೆಯಲಿದ್ದು, ಒಂದು ತಿಂಗಳ ನಂತರ ಮಾ.14ರಿಂದ ಏ.8ರವರೆಗೆ ಎರಡನೇ ಭಾಗದ ಅಧಿವೇಶನ ನಡೆಯಲಿದೆ.
ದೇಶದಲ್ಲಿ ಕೊರೋನಾ, ಒಮಿಕ್ರಾನ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಸಂಸತ್ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳಿಗೆ ಸೂಕ್ತ ಆರೋಗ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತದೆ.